ಮಾಲೂರು: ಸರ್ಕಾರದ ನಿಷೇಧದ ನಡುವೆಯೂ ಅಕ್ರಮವಾಗಿ ಕಲ್ಲುಬಂಡೆಗಳ ಸ್ಫೋಟಕ್ಕೆ ಮುಂದಾಗಿರುವ ಜಲ್ಲಿ ಕ್ರಷರ್ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಟೇಕಲ್ ಹೋಬಳಿಯ ಅನಿಮಿಟ್ಟನಹಳ್ಳಿ ಬಳಿ ನಡೆದಿದೆ.
ಬಂಧಿತರನ್ನು ತಮಿಳುನಾಡು ಮೂಲದ ಕಾರ್ಮಿಕರು ಎನ್ನಲಾಗಿದೆ. ಸ್ಥಳೀಯ ಜಿಪಂಸದಸ್ಯೆ ಗೀತಮ್ಮನವರ ಪತಿ ಕ್ಷೇತ್ರನಹಳ್ಳಿ ವೆಂಕಟೇಶಗೌಡ ಎನ್ನುವವರಿಗೆ ಸೇರಿದ್ದ ಜಲ್ಲಿಕ್ರಷರ್‌ನಲ್ಲಿ ಅಕ್ರಮ ಸ್ಫೋಟಕ ಸಂಗ್ರಹಿಸಿ ಸ್ಫೋಟದ ಸಂಚು ರೂಪಿಸಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾಸ್ತಿ ಪೊಲೀಸರುಜಿಲ್ಲಾ ಪೊಲೀಸ್ ಪಡೆಯೊಂದಿಗೆ ದಾಳಿನಡೆಸಿದ್ದಾರೆ.
ಜಿಲೆಟಿನ್ ಸಂಗ್ರಹ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಂದರ್ಭದಲ್ಲಿಕ್ರಷರ್‌ನ ಬಂಡೆ ಮೇಲೆ ಸುಮಾರು 50ಕಡೆಗಳಲ್ಲಿ ರಂಧ್ರಗಳನ್ನು ಕೊರೆದು ಜಿಲೆಟಿನ್‌ತುಂಬಿಸಿ ಸ್ಫೋಟದ ತಯಾರಿ ನಡೆಸಿರುವ ಬಗ್ಗೆಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸ್ಪಷ್ಟಪಡಿಸಿದ್ದಾರೆ.
ನಿಗಾ ವಹಿಸಲು ಸೂಚನೆ: ಈ ವೇಳೆಮಾತನಾಡಿದ ಜಿಲ್ಲಾಧಿಕಾರಿ ರಾಜ್ಯದಲ್ಲಿಅಕ್ರಮ ಸ್ಫೋಟಕಗಳನ್ನು ದಾಸ್ತನು ಮತ್ತು ಸ್ಫೋಟದ ವರದಿ ಕಾಣಿಸಿಕೊಂಡ ಕೂಡಲೇಸರ್ಕಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನಇಲಾಖೆ ನಿದೇರ್ಶಕರ ಅನುಮತಿ ಇಲ್ಲದೇ ಸ್ಫೋಟಕ ಬಳಕೆ ಮಾಡುವಂತಿಲ್ಲ ಎನ್ನುವ ಸ್ಪಷ್ಟಆದೇಶವಿದ್ದರೂ ಜಿಲೆಟಿನ್ ಕಡ್ಡಿಗಳ ಅಕ್ರಮ ದಾಸ್ತಾನು ಮತ್ತು ಸ್ಫೋಟ ನಡೆಯುತ್ತಿರುವಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಸಭೆ ನಡೆಸಲಾಗಿತ್ತು. ಅದರಂತೆ ಜಿಲ್ಲೆಯಎಲ್ಲಾ ಕಡೆಗಳಲ್ಲಿನ ಜಲ್ಲಿ ಕ್ರಷರ್‌ಗಳ ಮೇಲೆತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆಸಭೆಯಲ್ಲಿ ಸೂಚಿಸಲಾಗಿತ್ತು.
ತಲೆಮರೆಸಿಕೊಂಡಿರುವ ಮಾಲೀಕ: ಎಸ್ಪಿಡಾ. ಕಾರ್ತಿಕ್ ರೆಡ್ಡಿ ಮಾತನಾಡಿ, ಮಾಸ್ತಿಪಿಎಸ್‌ಐ ಸಂಗ್ರಹಿಸಿರುವ ಮಾಹಿತಿ ಮೇರೆಗೆ ಜಲ್ಲಿ ಕ್ರಷರ್ ಮೇಲೆ ದಾಳಿ ನಡೆಸಿದ್ದು,ತಮಿಳುನಾಡು ಮೂಲದ ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಕ್ರಷರ್‌ನ ಮಾಲೀಕ ಕೆ.ಎಸ್.ವೆಂಕಟೇಶ ಗೌಡ ತಲೆ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಶೋಧ ನಡೆಸುತ್ತಿರುವುದಾಗಿ ತಿಳಿಸಿದರು.ದಾಳಿಯ ಪ್ರದೇಶದಲ್ಲಿ ಪೊಲೀಸ್‌ಸಿಬ್ಬಂದಿಯನ್ನು ನಿಯೋಜಿಸಿದ್ದು, ಬಂಡೆಯಮೇಲೆ ಸ್ಫೋಟಕ್ಕಾಗಿ ಕೊರೆಯಲಾಗಿರುವರಂಧ್ರಗಳಲ್ಲಿ ತುಂಬಿಸಲಾಗಿರುವ ಜಿಲೆಟಿನ್ ಕಡ್ಡಿಗಳನ್ನು ಹೊರ ತೆಗೆಯಲು ಸ್ಫೋಟಕ ತಜ್ಞರಮಾರ್ಗದರ್ಶನಕ್ಕಾಗಿ ಕಾಯಲಾಗುತ್ತಿದೆ.