Advertisement

ಠಾಣೆಗೆ ನುಗ್ಗಿ ಡಿವೈಎಸ್‌ಪಿ ಮೇಲೆ ಹಲ್ಲೆ: ವೈರಲ್‌

03:02 PM Dec 29, 2021 | Team Udayavani |

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಠಾಣೆಗೆ ಭೇಟಿ ನೀಡಿದ ವೇಳೆ ಡಿವೈಎಸ್‌ಪಿ ಮುರಳೀಧರ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದ್ದುಇದರ ವಿಡಿಯೋ ಜಾಲ ತಾಣದಲ್ಲಿ ವೈರಲ್‌ ಆಗಿದೆ.

Advertisement

ಮಟ್ಟನವಿಲೆ ಗ್ರಾಮದಕೃಷ್ಣೇಗೌಡರ ಪುತ್ರ, ಎಐಟಿಯುಸಿ ಮುಖಂಡ ಕುಮಾರ್‌ ಹಾಗೂ ಇತರರಿಂದ ಡಿವೈಎಸ್‌ಪಿ ಮೇಲೆ ಹಲ್ಲೆ ಮಾಡಲಾಗಿದ್ದು ಕುಮಾರ್‌, ಸೇರಿದಂತೆಮೂವರು ಪುರುಷರು, ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಘಟನೆ ವಿವರ: ಹಿರೀಸಾವೆ ಠಾಣೆ ಮುಂದೆ ಕುಮಾರ್‌, ಇತರರು ಧರಣಿ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಡಿವೈಎಸ್‌ಪಿ ತೆರಳುವಾಗ ಹಿರೀಸಾವೆ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಠಾಣೆ ಹೊರಗೆ ಧರಣಿ ನಡೆಸುತ್ತಿದ್ದವರಲ್ಲಿ ಒಬ್ಬರು ಠಾಣೆ ಒಳಗೆ ಹೋಗಿ ತಮ್ಮ ಸಮಸ್ಯೆಯನ್ನು ಡಿವೈಎಸ್‌ಪಿಗೆ ತಿಳಿಸುವಂತೆ ಠಾಣೆ ಪೇದೆ ಹೇಳಿದ್ದಾರೆ.

ಕೂಡಲೇ ಕುಮಾರ್‌ ಧರಣಿ ನಿರತರನ್ನು ಒಟ್ಟಿಗೆ ಕರೆದುಕೊಂಡು ಠಾಣೆ ಒಳಗೆ ನುಗ್ಗಿ ಡಿವೈಎಸ್‌ಪಿ ಮುರಳೀಧರ್‌ ಕಾಲರ್‌ ಹಿಡಿದು ಎಳೆದಾಡಿರುವುದು, ಎದೆಗೆ ಥಳಿಸಿರುವುದು ಹಾಗೂ ಧರಣಿಯಲ್ಲಿ ಬಾವುಟದ ಕೋಲಿನಿಂದ ಹೊಟ್ಟೆಗೆ ಚುಚ್ಚಿರುವ ವಿಡಿಯೋ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಠಾಣೆಯಲ್ಲಿ ಹೆಚ್ಚಿನ ಸಿಬ್ಬಂದಿ ಇರದಿದ್ದರಿಂದ

ಅನಾಹುತ: ಡಿ.27 ರಂದು ತಾಲೂಕಿನ 20 ಗ್ರಾಪಂಕ್ಷೇತ್ರದಲ್ಲಿ ಚುನಾವಣೆ ಇದ್ದರಿಂದ ಠಾಣೆಯಲ್ಲಿಬೆರಳೆಣಿಕೆ ಮಂದಿ ಮಾತ್ರ ಪೊಲೀಸರು ಇರುವುದನ್ನುಗಮನಿಸಿ ಕೃತ್ಯವೆಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದುಈ ಬಗ್ಗೆ ಹಿರೀಸಾವೆ ಠಾಣೆಯಲ್ಲಿ ದೂರುದಾಖಲಾಗಿದೆ.

Advertisement

ಹಲ್ಲೆಗೆ ಹಿನ್ನೆಲೆ ಏನು? :

ಮಟ್ಟನಿವಲೆ ಗ್ರಾಪಂ ಸದಸ್ಯ ಅಶೋಕ್‌ ಹಾಗೂ ಕುಮಾರ್‌ ನಡುವೆ ಡಿ.27 ರಂದು ಜಮೀನಿನ ವಿಷಯವಾಗಿ ಗಲಾಟೆ ನಡೆದಿತ್ತು. ಈ ವೇಳೆ ಅಶೋಕ್‌ರ ಮೇಲೆ ಕುಮಾರ್‌ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಶೋಕ್‌ ಪರಾರಿಯಾಗಿದ್ದರು. ತಕ್ಷಣ ಕುಮಾರ್‌ ಮಟ್ಟನವಿಲೆ ಹಾಗೂ ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಶೋಕ್‌ನನ್ನು ಹುಡುಕಿದ್ದರು. ಅಲ್ಲಿ ಕಾಣಿಸದ ಹಿನ್ನೆಲೆ ಠಾಣೆ ಮುಂದೆ ಧರಣಿ ನಡೆಸಿದ್ದಾರೆ. ಈ ವೇಳೆ ಏಕಾಏಕಿ ಡಿವೈಎಸ್‌ಪಿ ಮೇಲೆ ಹಲ್ಲೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈಗ್ಗೆ ತಿಂಗಳ ಹಿಂದೆ ಹಿರೀಸಾವೆ ವೃತ್ತ ನಿರೀಕ್ಷಕಿ ಭಾನು ಮಟ್ಟನವಿಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕುಮಾರ್‌ ಪೊಲೀಸರೊಂದಿಗೆ ಜಗಳವಾಡಿದ ವಿಡಿಯೋ ವೈರಲ್‌ ಆಗಿತ್ತು. ಸೇಡು ತೀರಿಸಿಕೊಳ್ಳಲು ಆರೋಪಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾನೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next