Advertisement

ಹುಬ್ಬಳ್ಳಿಯಲ್ಲಿ ಸಹೋದರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

10:15 PM Jul 02, 2021 | Team Udayavani |

ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಆತನ ಚಿಕ್ಕಪ್ಪನ ಮಗನೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಇಂದು ರಾತ್ರಿ ( ಜುಲೈ.2) ನಡೆದಿದೆ.

Advertisement

ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಕೌಟುಂಬಿಕ ವಿಷಯವಾಗಿ ಚಿಕ್ಕಪ್ಪನ ಮಗನು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದೆ.

ಸಾದೀಕ್  ಬೆಕ್ಕಿನಬಾಯಿ ಎಂಬುವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ‌ಬೆಕ್ಕಿನಬಾಯಿ ಮಚ್ಚಿನಿಂದ ತಲೆಗೆ ಹಾಗೂ ದೇಹದ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಘಂಟಿಕೇರಿ ಠಾಣೆ ಇನ್ಸಪೆಕ್ಟರ್ ತೆರಳಿ ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next