Advertisement

ವಾರ್ಡನ್‌ ಮೇಲೆ ಗುತ್ತಿಗೆದಾರನಿಂದ ಹಲ್ಲೆ-ಪ್ರತಿಭಟನೆ

10:51 AM Aug 27, 2019 | Suhan S |

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯದ ವಾರ್ಡನ್‌ ಆಗಿರುವ ಮಲ್ಲಿಕಾರ್ಜುನ ಹುಲೇಕರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಜಿಲ್ಲಾ ವಸತಿ ನಿಲಯ ಮೇಲ್ವಿಚಾರಕರ ಸಂಘದ ನೇತೃತ್ವದಲ್ಲಿ ವಾರ್ಡನ್‌ಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಆ.23ರಂದು ಮಧ್ಯಾಹ್ನ ವಾರ್ಡನ್‌ ಮಲ್ಲಿಕಾರ್ಜುನ ಹುಲೇಕರ ಎನ್ನುವರ ಮೇಲೆ ಗುತ್ತಿಗೆದಾರ ರಾಜಕುಮಾರ ಜನಕೇರಿ ಎನ್ನುವಾತ ಹಲ್ಲೆ ಮಾಡಿದ್ದಾನೆ. ಎಂಟು ತಿಂಗಳ ಹಿಂದಿನ ಅಸಮಂಜಸ ಬಿಲ್ ತಂದು ಸಹಿ ಮಾಡುವಂತೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದೇ ಇದ್ದಾಗ ವಾರ್ಡನ್‌ ಮೇಲೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಿಂದ ವಾರ್ಡನ್‌ ಹುಲೇಕರ ತಲೆ, ಭುಜ, ಕಾಲಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಆರೋಪಿಯಿಂದ ವಾರ್ಡನ್‌ಗೆ ಜೀವ ಬೆದರಿಕೆ ಇದೆ ಎಂದು ಪ್ರತಿಭಟನಾಕಾರರು ದೂರಿದರು.

ವಾರ್ಡನ್‌ಗಳು ನಿರ್ಭೀತಿಯಿಂದ ಸರ್ಕಾರಿ ಸೇವೆ ಸಲ್ಲಿಸಲು ರಕ್ಷಣೆ ನೀಡಬೇಕು. ಹಲ್ಲೆ ಆರೋಪಿ ರಾಜಕುಮಾರ ಜನಕೇರಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು. ಆರೋಪಿ ಒಡೆತನದ ಲಕ್ಷ್ಮಿ ಟೆಂಡರ್ ಕಪ್ಪು ಪಟ್ಟಿಗೆ ಸೇರಿಸಬೇಕು. ಲಕ್ಷ್ಮಿ ಟೆಂಡರ್ನ ಬಾಕಿ ಉಳಿದಿರುವ ಯಾವುದೇ ಬಿಲ್ಗಳನ್ನು ಮಂಜೂರು ಮಾಡದೇ ರದ್ದು ಪಡಿಸಬೇಕೆಂದು ಪ್ರತಿಭಟನಾ ನಿರತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಹಿಬೂಬ್‌ ಸಾಬ ಕಾರಟಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next