Advertisement

Vitla: ಮಾತಿನ ಚಕಮಕಿ; ಹಲ್ಲೆ. ಜೀವ ಬೆದರಿಕೆ

10:35 PM Jun 08, 2024 | Team Udayavani |

ವಿಟ್ಲ: ವಾಹನಗಳನ್ನು ಅಡ್ಡವಿಟ್ಟು ಮಾತಿನ ಚಕಮಕಿ ನಡೆಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿಕೊಂಡ ವಿಚಾರದಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Advertisement

ಕನ್ಯಾನ ಪ್ರಕಾಶ (46) ಶುಕ್ರವಾರ ಸಾಯಂಕಾಲ ಸ್ಕೂಟರಿನಲ್ಲಿ ಗಣೇಶ್‌ ಅವರನ್ನು ಕೂರಿಸಿಕೊಂಡು ಬಾಯಾರು ಕಡೆಗೆ ಹೋಗುತ್ತಿರುವಾಗ ಕನ್ಯಾನ ಶಾಲಾ ಬಳಿ, ಅಪಾಯಕಾರಿಯಾಗಿ ಕಾರನ್ನು ಚಲಾಯಿಸಿದ್ದನ್ನು ಚಾಲಕನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಿನ ಚಾಲಕ ಹಾಗೂ ಅದರಲ್ಲಿದ್ದ ಮೂವರು, ಕನ್ಯಾನದ ಐಟಿಐ ಬಳಿ ಸ್ಕೂಟರಿಗೆ ಕಾರನ್ನು ಅಡ್ಡವಾಗಿ ಇಟ್ಟು, ತಡೆದು ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಾರಿನಲ್ಲಿ ಪರಾರಿಯಾಗಿದ್ದಾರೆಂದು ದೂರಿನಲ್ಲಿ ಹೇಳಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ಯಾನ ಮಹಮ್ಮದ್‌ ಸಯಾಫ್‌ (25) ಶುಕ್ರವಾರ ಸಾಯಂಕಾಲ ಕಾರಿನಲ್ಲಿ ಸ್ನೇಹಿತರಾದ ರಾಝಿಕ್‌ ಮತ್ತು ಅಬ್ದುಲ್‌ ಖಾದರ್‌ರನ್ನು ಕುಳ್ಳಿರಿಸಿಕೊಂಡು, ತನ್ನ ಮನೆ ಕಡೆಗೆ ಹೋಗುತ್ತಿರುವಾಗ, ಕನ್ಯಾನ ಭಜನ ಮಂದಿರದ ಬಳಿ ಪ್ರಕಾಶ ಹಾಗೂ ಆತನ ಸ್ನೇಹಿತ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದು, ವಾಹನ ಅಡ್ಡಗಟ್ಟಿ ನಿಲ್ಲಿಸಿದ್ದಾನೆ. ಪ್ರಕಾಶ್‌ ದ್ವಿಚಕ್ರ ವಾಹನದಿಂದ ರಾಡ್‌ ಸಯಾಫ್‌ ಹಾಗೂ ಅಬ್ದುಲ್‌ ಖಾದರ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಕಾಶ ಮತ್ತು ಆತನ ಗೆಳೆಯ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ಸ್ಥಳಿಯರು ಸೇರಿದ್ದಾರೆ. ಇದನ್ನು ಗಮನಿಸಿ ಇಬ್ಬರೂ ದ್ವಿಚಕ್ರ ವಾಹನ ಸಹಿತ ಅಲ್ಲಿಂದ ತೆರಳಿದ್ದಾರೆ. ಮಹಮ್ಮದ್‌ ಸಯಾಫ್‌ ಹಾಗೂ ಅಬ್ದುಲ್‌ ಖಾದರ್‌ ತುಂಬೆ ಫಾದರ್‌ಮುಲ್ಲರ್‌ಆಸ್ಪತ್ರೆಯಲ್ಲಿ ದಾಖಲಾಗಿ ದೂರು ನೀಡಿದ್ದು, ಪ್ರತಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next