Advertisement

ATP Singles Ranking: ಸುಮಿತ್‌ ಜೀವನಶ್ರೇಷ್ಠ 71ನೇ ರ್‍ಯಾಂಕಿಂಗ್‌

11:49 PM Jun 17, 2024 | Team Udayavani |

ಹೊಸದಿಲ್ಲಿ: ಎಟಿಪಿ ಸಿಂಗಲ್‌ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸುತ್ತಲೇ ಇರುವ ಭಾರತದ ಸುಮಿತ್‌ ನಾಗಲ್‌ ಈಗ ಜೀವನಶ್ರೇಷ್ಠ 71ನೇ ಸ್ಥಾನಕ್ಕೆ ಏರಿದ್ದಾರೆ. ಇವರ ಹಿಂದಿನ ಅತ್ಯುತ್ತಮ ರ್‍ಯಾಂಕಿಂಗ್‌ 77 ಆಗಿತ್ತು. ಕಳೆದ ವಾರವಷ್ಟೇ ಈ ಸ್ಥಾನದಲ್ಲಿದ್ದರು. ಪೆರುಗ್ಯಾ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಆದ ಬಳಿಕ ಒಮ್ಮೆಲೇ 6 ಸ್ಥಾನ ಮೇಲೇರಿದರು.

Advertisement

26 ವರ್ಷದ ಸುಮಿತ್‌ ನಾಗಲ್‌ ಪ್ರಸ್ತುತ 777 ಎಟಿಪಿ ಅಂಕ ಹೊಂದಿದ್ದಾರೆ. ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ಆಟಗಾರನೆಂಬುದು ಇವರ ಹೆಗ್ಗಳಿಕೆ. 2023ರಿಂದೀಚೆ 4 ಎಟಿಪಿ ಚಾಲೆಂಜರ್‌ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಸುಮಿತ್‌ ನಾಗಲ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next