Advertisement

ಜೊಕೋವಿಕ್‌ ಬಲೆಗೆ ಬಿದ್ದ ರಫೆಲ್‌ ನಡಾಲ್‌

10:01 AM Jan 14, 2020 | Team Udayavani |

ಸಿಡ್ನಿ: ರವಿವಾರದ “ಎಟಿಪಿ ಕಪ್‌ ಫೈನಲ್‌’ನಲ್ಲಿ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ತಮ್ಮ ಬದ್ಧ ಎದುರಾಳಿ ರಫೆಲ್‌ ನಡಾಲ್‌ ಅವರಿಗೆ ಸೋಲುಣಿಸಿ ಸಂಭ್ರಮ ಆಚರಿಸಿದ್ದಾರೆ. ವಿಶ್ವದ ನಂ.1 ಟೆನಿಸಿಗನನ್ನು ಜೊಕೋ 6-2, 7-6 (7-4) ಅಂತರದಿಂದ ಮಣಿಸಿದರು.

Advertisement

ಇದರೊಂದಿಗೆ ಸರ್ಬಿಯಾ-ಸ್ಪೇನ್‌ ನಡುವಿನ ತಂಡ ಸ್ಪರ್ಧೆ 1-1 ಅಂತರದಿಂದ ಸಮಬಲಕ್ಕೆ ಬಂತು. ಅನಂತರದ ಸಿಂಗಲ್ಸ್‌ ನಲ್ಲಿ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ 7-5, 6-1ರಿಂದ ಸರ್ಬಿಯಾದ ಡುಸಾನ್‌ ಲಾಜೋವಿಕ್‌ಗೆ ಸೋಲುಣಿಸಿದ್ದರು.

“ಪ್ರತೀ ಸಲವೂ ನಡಾಲ್‌ ವಿರುದ್ಧ ಆಡುವಾಗ ಏನೋ ರೋಮಾಂಚನವಾಗುತ್ತದೆ. ಇಂದು ನಾನು ಪರಿಪೂರ್ಣ ಆರಂಭ ಪಡೆದೆ. ಕೊನೆಯಲ್ಲಿ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿದ್ದರೂ ನಾನು ನರ್ವಸ್‌ ಆಗಲಿಲ್ಲ’ ಎಂಬುದಾಗಿ ಜೊಕೋವಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next