Advertisement

ನಿಮ್ಮನ್ನು ಗುರುತಿಸೋ ಎಟಿಎಂ

06:35 AM Nov 09, 2017 | Team Udayavani |

ಹೊಸದಿಲ್ಲಿ: ಒಂದೆಡೆ ನಗದು ವಹಿವಾಟು ಕಡಿಮೆಯಾಗುತ್ತಿದ್ದು, ಈಗಿರುವ ಎಟಿಎಂಗಳು ಮುಚ್ಚುತ್ತಿರುವ ಮಧ್ಯೆಯೇ ಅತ್ಯಾಧುನಿಕ ಎಟಿಎಂಗಳು ಕಾಲಿಡಲು ಸಜ್ಜಾಗಿವೆ. ಮುಖ ಗುರುತು ಹಿಡಿಯುವ ಮತ್ತು ಬಯೋಮೆಟ್ರಿಕ್‌ ವ್ಯವಸ್ಥೆ ಹೊಂದಿರುವ ಎಟಿಎಂಗಳನ್ನು ಎಟಿಎಂ ಸೇವೆ ಒದಗಿಸುವ ಎನ್‌ಸಿಆರ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಎಟಿಎಂಗಳು ಹಣ ಹಿಂಪಡೆಯುವ ಹಾಗೂ ಹಣ ಡೆಪಾಸಿಟ್‌ ಮಾಡುವ ಸೌಲಭ್ಯಗಳನ್ನು ಒಳಗೊಂಡಿದ್ದು, ಡೆಪಾಸಿಟ್‌ ಮಾಡಿದ ಹಣವನ್ನೇ ಹಿಂಪಡೆಯುವ ಗ್ರಾಹಕರಿಗೆ ನೀಡುತ್ತದೆ. ಹೀಗಾಗಿ ಎಟಿಎಂಗೆ ಹಣ ತುಂಬುವ ವ್ಯವಸ್ಥೆಯ ಮೇಲೆ ಹೊರೆ ಕಡಿಮೆಯಾಗಲಿದೆ.

Advertisement

ನೋಟು ಅಮಾನ್ಯದ  ನಂತರ ಎಟಿಎಂಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಪ್ರಸ್ತುತ ಎಟಿಎಂ ತಂತ್ರಜ್ಞಾನವನ್ನು ಬದಲಿಸಿದರೆ ಎಟಿಎಂ ಮಾರುಕಟ್ಟೆ ಈ ಹಿಂದಿನಂತೆ  ಶೇ.9ರಲ್ಲಿ ಬೆಳೆಯಲಿದೆ. ನೋಟು ಅಮಾನ್ಯದ ನಂತರ ಎಟಿಎಂ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿತ್ತು. ಸದ್ಯ ಚಾಲ್ತಿಯಲ್ಲಿರುವ ಎಟಿಎಂಗಳು 10 ವರ್ಷಗಳಷ್ಟು ಹಳೆಯ ತಂತ್ರಜ್ಞಾನದ್ದು. ಹೊಸ ಎಟಿಎಂಗಳನ್ನು ನಗರ ಪ್ರದೇಶಗಳಲ್ಲಿ ಸ್ಥಾಪಿಸಿ, ಹಳೆಯ ಎಟಿಎಂ ಗಳನ್ನು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸ ಬಹುದಾಗಿದೆ. ಹೊಸ ತಂತ್ರಜ್ಞಾನದ ಎಟಿಎಂಗಳಲ್ಲಿ ಕೇವಲ ಹಣ ಹಿಂಪಡೆಯುವುದಷ್ಟೇ ಅಲ್ಲ, ಇತರ ಬ್ಯಾಂಕಿಂಗ್‌ ಕೆಲಸಗಳನ್ನೂ ಮಾಡಬಹುದಾಗಿದೆ. ಇದರಿಂದ ಬ್ಯಾಂಕ್‌ಗಳ ಮೇಲೆ ಹೊರೆಯೂ ಕಡಿಮೆಯಾಗಲಿದೆ.

ಎಟಿಎಂನಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಗಾಗಿ ಎನ್‌ಸಿಆರ್‌ ಶ್ರಮಿಸುತ್ತಿದ್ದು, ಹೈದರಾಬಾದ್‌ನಲ್ಲಿ ವಿಶೇಷ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next