Advertisement

ಜನವರಿಯಿಂದ ಎಟಿಎಂ ವ್ಯವಹಾರ ಶುಲ್ಕ ಹೆಚ್ಚಳ

12:01 AM Jun 11, 2021 | Team Udayavani |

ಹೊಸದಿಲ್ಲಿ: ಮಾಸಿಕ 5 ವ್ಯವಹಾರಗಳ ಮಿತಿಯನ್ನು ದಾಟಿದ ಎಟಿಎಂ ಆಧಾರಿತ ನಗದು ಅಥವಾ ನಗದು ರಹಿತ ಪ್ರತೀ ವ್ಯವಹಾರದ ಮೇಲೆ 21 ರೂ. ಶುಲ್ಕ ವಿಧಿಸಲು ಆರ್ಬಿಐ ಒಪ್ಪಿಗೆ ನೀಡಿದೆ. ಈವರೆಗೆ ಮಿತಿ ದಾಟಿದ ಇಂಥ ಪ್ರತಿಯೊಂದು ವ್ಯವಹಾರಕ್ಕೂ 20 ರೂ. ಶುಲ್ಕ ವಿಧಿಸಲಾಗಿತ್ತು. 2022 . 1 ಇಂಥ ಮಿತಿ ಮೀರಿದ ಪ್ರತೀ ವ್ಯವಹಾರಕ್ಕೆ 21 ರೂ. ಶುಲ್ಕ ನೀಡಬೇಕಾಗುತ್ತದೆ.

Advertisement

ಮೆಟ್ರೋ ನಗರಗಳಲ್ಲಿರುವ ಅನ್ಯ ಬ್ಯಾಂಕ್ಗಳ ಎಟಿಎಂನಲ್ಲಿ ಮಾಸಿಕ ಗರಿಷ್ಠ 3 ಹಾಗೂ ನಾನ್ಮೆಟ್ರೋ ನಗರಗಳಲ್ಲಿರುವ ಅನ್ಯ ಬ್ಯಾಂಕ್ ಎಟಿಎಂಗಳಲ್ಲಿ ಮಾಸಿಕ ಗರಿಷ್ಠ 5 ವ್ಯವಹಾರಗಳನ್ನು ನಡೆಸಬಹುದಾಗಿದೆ.

ಇಂಟರ್ಚೇಂಜ್ ಶುಲ್ಕ ಹೆಚ್ಚಳ

ಎಟಿಎಂನಲ್ಲಿ ಗ್ರಾಹಕರು ನಡೆಸುವ ಪ್ರತಿಯೊಂದು ಹಣದ ವ್ಯವಹಾರದ ಮೇಲೆ ವಿಧಿಸಲಾಗುವ ಇಂಟರ್ಚೇಂಜ್ ಶುಲ್ಕವನ್ನು 15 ರೂ.ಗಳಿಂದ 17 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ನಿಯಮ, ಇದೇ ವರ್ಷ . 1ರಿಂದ ಜಾರಿಗೊಳ್ಳುತ್ತದೆ. ನಗದು ರಹಿತವಾಗಿರುವ ಪ್ರತಿಯೊಂದು ವ್ಯವಹಾರದ ಮೇಲೆ ಇಂಟರ್ಚೇಂಜ್ ಶುಲ್ಕವನ್ನು 5 ರೂ.ಗಳಿಂದ 6 ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next