ಕಲಬುರಗಿ: ಜೂನ್ 6 ರಂದು ಕಲಬುರಗಿಯ ಕುಂಬಾರಹಳ್ಳಿಯಲ್ಲಿ ಇಂಡಿಯಾ 1 ಎಟಿಎಂ ದರೋಡೆಗೈದು 14 ಲಕ್ಷ ರೂಪಾಯಿ ದೋಚಿದ್ದ ಖತರ್ನಾಕ್‌ನನ್ನು ದುಬೈನಲ್ಲಿ ವಶಕ್ಕೆ ಪಡೆಯಲಾಗಿದೆ.
ಬಂಧಿತ ಶಿವಕುಮಾರ್ (25) ಎನ್ನುವವನಾಗಿದ್ದು, ದರೋಡೆ ಬಳಿಕ ನಕಲಿ ಪಾಸ್‌ಪೋರ್ಟ್ ದಾಖಲೆಗಳ ಮೂಲಕ ಪ್ರವಾಸಿ ವೀಸಾ ಪಡೆದು ದುಬೈಗೆ ಎಸ್ಕೇಪ್ ಆಗಿದ್ದ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆಗಿಳಿದ ವಾಡಿ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಎಟಿಎಂನ ಕಾವಲುಗಾರನಾಗಿದ್ದ ಜಗದೇವಪ್ಪ (26) ಮತ್ತು ಜಗನ್ನಾಥ(25) ಎನ್ನುವ ಆರೋಪಿಗಳನ್ನು 10 ಲಕ್ಷ ರೂಪಾಯಿ ನಗದು ಸಮೇತ ವಶಕ್ಕೆ ಪಡೆದಿದ್ದರು.
ಇಬ್ಬರ ವಿಚಾರಣೆ ವೇಳೆ ಶಿವಕುಮಾರ್ ದುಬೈಗೆ ಪರಾರಿಯಾಗಿರುವ ವಿಚಾರ ತಿಳಿದು ಬಂದಿದ್ದು, ಭಾರತೀಯ ರಾಯಭಾರಿಗಳನ್ನು ಸಂಪರ್ಕಿ ಕೂಡಲೇ ಆತನನ್ನು ಭಾರತಕ್ಕೆ ವಾಪಾಸ್ ಕರೆಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡೆ ಹಿಡಿದು ಕೃತ್ಯ
ಬಂಧಿತರು ಸಿಸಿಟಿವಿಗೆ ಕೊಡೆ ಅಡ್ಡಲಾಗಿ ಹಿಡಿದು ಎಟಿಎಂ ಪಾಸ್‌ವರ್ಡ್ ಬಳಸಿ ಹಣ ದೋಚಿದ್ದರು. ಬಳಿಕ ಮೂವರು ನಾಪತ್ತೆಯಾಗಿದ್ದರು.