ನವದೆಹಲಿ: ಎಟಿಎಂನಿಂದ(ATM)ಹಣ ವಿತ್ ಡ್ರಾ ಮಾಡಲು ಇನ್ಮುಂದೆ ಇನ್ನಷ್ಟು ಹೆಚ್ಚಿನ ಶುಲ್ಕ ತೆರಬೇಕಾಗಲಿದೆ. ಹೌದು ಎಟಿಎಂನಿಂದ ನಗದು ವಿತ್ ಡ್ರಾ ಮಾಡುವ ಶುಲ್ಕವನ್ನು ಏರಿಕೆ ಮಾಡಬೇಕೆಂದು ದ ಕಾನ್ ಫೆಡರೇಸನ್ ಆಫ್ ಎಟಿಎಂ ಇಂಡಸ್ಟ್ರಿ(CATMI) ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ಕ್ಕೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Ghaziabad: ಮೂರೂ ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳ ಸಹಿತ ಐವರು ಸಜೀವ ದಹನ
ಉದ್ಯಮಕ್ಕೆ ಹೆಚ್ಚಿನ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಪ್ರತಿ ವಿತ್ ಡ್ರಾಕ್ಕೆ ಗರಿಷ್ಠ 23 ರೂಪಾಯಿವರೆಗೆ ಶುಲ್ಕ ವಿಧಿಸಬೇಕೆಂದು ಸಿಎಟಿಎಂಐ ಮನವಿ ಮಾಡಿದೆ. ಈ ಶುಲ್ಕವನ್ನು ಎಟಿಎಂ ಕಾರ್ಡ್ ವಿತರಿಸುವ ಬ್ಯಾಂಕ್ ಗಳಿಗೆ ಪಾವತಿಸಲಾಗುತ್ತದೆ.
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ, ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ಆಯಾ ಬ್ಯಾಂಕ್ ಗಳು ಪ್ರತಿ ತಿಂಗಳು ಕನಿಷ್ಠ ಐದು ಬಾರಿ ಉಚಿತವಾಗಿ ಹಣವನ್ನು ಎಟಿಎಂನಿಂದ ವಿತ್ ಡ್ರಾ ಮಾಡಬಹುದಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಮುಂಬೈ, ನವ ದೆಹಲಿ ಸೇರಿದಂತೆ ಮೆಟ್ರೋ ನಗರಗಳಲ್ಲಿ ಐದು ಬಾರಿ ಎಟಿಎಂನಿಂದ ಉಚಿತವಾಗಿ ಹಣ ತೆಗೆಯಬಹುದಾಗಿದೆ. ನಮ್ಮ ಖಾತೆ ಹೊಂದಿರುವ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಗಳ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಲು ಅವಕಾಶವಿತ್ತು.
ಈ ಬಗ್ಗೆ ಎಟಿಎಂ ತಯಾರಿಕೆಯ ಎಜಿಎಸ್ ಟೆಕ್ನಾಲಜೀಸ್ ನ ಕಾರ್ಯಕಾರಿ ನಿರ್ದೇಶಕ ಸ್ಟ್ಯಾನ್ಲಿ ಜಾನ್ಸನ್ ಎಕಾನಮಿಕ್ಸ್ ಟೈಮ್ಸ್ ಜತೆ ಮಾತನಾಡುತ್ತ, ಎರಡು ವರ್ಷಗಳ ಹಿಂದೆ ಶುಲ್ಕವನ್ನು ಏರಿಸಲಾಗಿತ್ತು. ಇದೀಗ ಸಿಎಟಿಎಂಐ ಆರ್ ಬಿಐಗೆ ಶುಲ್ಕ ಹೆಚ್ಚಳಕ್ಕಾಗಿ ಮನವಿ ಸಲ್ಲಿಸಿದೆ. 21 ರೂ. ಏರಿಕೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಇತರ ಎಟಿಎಂ ತಯಾರಿಕಾ ಸಂಸ್ಥೆಗಳು 23 ರೂ. ಗೆ ಏರಿಕೆ ಮಾಡಲು ಪ್ರಸ್ತಾಪ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
2021ರಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು 15ರೂಪಾಯಿಂದ 17 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಹೆಚ್ಚುವರಿ transactionಗೆ 20ರಿಂದ 21ರೂ.ಗೆ ಏರಿಕೆ ಮಾಡಲಾಗಿತ್ತು ಎಂದು ಜಾನ್ಸನ್ ತಿಳಿಸಿದ್ದಾರೆ.