Advertisement

ಮಿತಿ ಮೀರಿ ATM ನಿಂದ ಹಣ ವಿತ್ ಡ್ರಾ ಮಾಡುವುದು ಇನ್ಮುಂದೆ ದುಬಾರಿ: RBI ಹೇಳಿದ್ದೇನು..?

04:16 PM Jun 11, 2021 | |

ನವ ದೆಹಲಿ:  ನೀವು ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡುವುದಕ್ಕೆ ಇನ್ಮುಂದೆ ಹಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಟಿಎಂಗಳಿಂದ ಉಚಿತ ವಿತ್ ಡ್ರಾ ಮಿತಿಯ ನಂತರದ ವಹಿವಾಟಿನ ಶುಲ್ಕವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏರಿಕೆ ಮಾಡಿ ದೇಶ ಹೊರಡಿಸಿದೆ.

Advertisement

ಇದನ್ನೂ ಓದಿ : ಪ್ರತಿ ಕ್ವಿಂಟಲ್ ಭತ್ತದ ಬೆಂಬಲ ಬೆಲೆ 1,940 ರೂ.ಗೆ ಏರಿಕೆ : ಕೇಂದ್ರ ಸರ್ಕಾರ

ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡುವುದು ಇನ್ಮುಂದೆ ದುಬಾರಿ  :

ಒಂದು ತಿಂಗಳಲ್ಲಿ ತಮ್ಮ ಬ್ಯಾಂಕಿನ ಎಟಿಎಂಗಳಿಂದ 5 ಉಚಿತ ವಹಿವಾಟು ನಡೆಸಲು ಅವಕಾಶವಿದ್ದರೆ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ 3 ವಹಿವಾಟುಗಳು ಮುಕ್ತವಾಗಿವೆ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಿಂದ ಹಣ ಹಿಂಪಡೆಯಲು ಮೊದಲ 5 ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಮಿತಿಯನ್ನು ಮೀರಿ ಹಣ ವಿತ್ ಡ್ರಾ ಮಾಡಿದ್ದಲ್ಲಿ ನಿಮ್ಮ ಖಾತೆಗೆ ಇನ್ಮುಂದೆ ಕತ್ತರಿ ಬೀಳಲಿದೆ.

ಬ್ಯಾಂಕ್ ಗಳು ನೀಡುವ  ಮಿತಿಯ ನಂತರ, ಗ್ರಾಹಕರು ಎಟಿಎಂನಿಂದ ಯಾವುದೇ ವಹಿವಾಟು ನಡೆಸಿದರೆ, ಅವರು ಪ್ರತಿ ವಹಿವಾಟಿಗೆ 21 ರೂ. ಪಾವತಿಸಬೇಕಾಗುತ್ತದೆ, ಅದು ಇಲ್ಲಿಯವರೆಗೆ 20 ರೂ. ಆಗಿತ್ತು. ಆರ್‌ ಬಿ ಐ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈ ಶುಲ್ಕವು ಜನವರಿ 1, 2022 ರಿಂದ ಗ್ರಾಹಕರಿಗೆ ಅನ್ವಯವಾಗುತ್ತದೆ ಎಂದು ವರದಿ ತಿಳಿಸಿದೆ.

Advertisement

ಇದಲ್ಲದೆ, ಎಟಿಎಂ ಸ್ಥಾಪನೆ ಮತ್ತು ನಿರ್ವಹಣೆಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 9 ವರ್ಷಗಳ ನಂತರ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್‌ಬಿಐ ಅನುಮತಿಸಿದ್ದು, ಆರ್‌ ಬಿ ಐ ಯಾವುದೇ ಹಣಕಾಸು ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು ಪ್ರತಿ ವಹಿವಾಟಿಗೆ 15 ರೂ.ನಿಂದ 17 ರೂ.ಗೆ, ಹಣಕಾಸಿನೇತರ ವಹಿವಾಟಿಗೆ 5 ರೂ.ಗಳಿಂದ 6 ರೂ.ಗೆ ಹೆಚ್ಚಿಸಿದೆ.

ಈ ಹೊಸ ಶುಲ್ಕಗಳು ಆಗಸ್ಟ್ ನಿಂದ ಅನ್ವಯ

ಯಾವುದೇ ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂನಿಂದ ವಹಿವಾಟು ನಡೆಸಿದಾಗ, ಕಾರ್ಡ್ ನೀಡುವ ಬ್ಯಾಂಕ್  ಎಟಿಎಂ ಆಪರೇಟರ್‌ ಗೆ ಶುಲ್ಕವನ್ನು ಪಾವತಿಸುತ್ತದೆ, ಇದನ್ನು ಇಂಟರ್ಚೇಂಜ್ ಶುಲ್ಕ ಎಂದು ಕರೆಯಲಾಗುತ್ತದೆ. ಪ್ರಸ್ತುತ, ಈ ಇಂಟರ್ಚೇಂಜ್ ಶುಲ್ಕವು ಹಣಕಾಸಿನ ವಹಿವಾಟಿಗೆ 15 ರೂ. ಮತ್ತು ಹಣಕಾಸಿನೇತರ ವಹಿವಾಟಿಗೆ 5 ರೂ. ಆಗಿದೆ. ಇದನ್ನು 17 ಮತ್ತು 6 ರೂ.ಗಳಿಗೆ ಹೆಚ್ಚಿಸಲಾಗಿದೆ.

ಎರಡು ವರ್ಷಗಳ ಹಿಂದೆ, ಆರ್‌ಬಿಐ ಉಚಿತ ವಹಿವಾಟಿನ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರಲ್ಲಿ ಎಟಿಎಂನಲ್ಲಿ ಯಾವ ವಹಿವಾಟುಗಳು ಉಚಿತ ಮತ್ತು ಯಾವುದು ಉಚಿತವಲ್ಲ ಎಂದು ತಿಳಿಸಿತ್ತು. ಈಗ ಒಂಬತ್ತು ವರ್ಷಗಳ ನಂತರ ಈ ಶುಲ್ಕವನ್ನು ಆರ್ ಬಿ ಐ ಹೆಚ್ಚಳ ಮಾಡಲು ಬ್ಯಾಂಕ್ ಗಳಿಗ ಅನುಮತಿ ನೀಡಿದೆ.

ಇದನ್ನೂ ಓದಿ :  ರಾಜ್ಯ ಅನ್ ಲಾಕ್: ರಾತ್ರಿ ಕರ್ಫ್ಯೂ , ವೀಕೆಂಡ್ ಕರ್ಫ್ಯೂ ಬಗ್ಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ

Advertisement

Udayavani is now on Telegram. Click here to join our channel and stay updated with the latest news.

Next