Advertisement

ಆಟಿಸಂ

05:05 PM Apr 03, 2018 | |

ಸಾಮಾನ್ಯ ಮಕ್ಕಳಿಗಿಂತ ಭಿನ್ನರಾಗಿ ಇರುವುದು, ಸಂವಹನದ ಕೊರತೆ, ಯಾವುದೇ ವಿಚಾರದಲ್ಲೂ ತೊಡಗದೇ ಇರುವುದು ಇದು ಆಟಿಸಂ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇದನ್ನು ಕಾಯಿಲೆ ಎನ್ನುವುದಕ್ಕಿಂತಲೂ ನ್ಯೂನತೆ ಎಂದೇ ಹೇಳಲಾಗುತ್ತದೆ.  ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಈ ನ್ಯೂನತೆ ಅವರ ಭವಿಷ್ಯವನ್ನೇ ಹಾಳು ಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ಹೆತ್ತವರು ಯಾವುದೇ ಕಾರಣಕ್ಕೂ ಇದೊಂದು ದೇವರು ಕೊಟ್ಟ ಶಿಕ್ಷೆ ಎಂದು ಭಾವಿಸಿ ಸುಮ್ಮನಿರದೆ, ಎಳವೆಯಲ್ಲೇ ಮಕ್ಕಳಿಗೆ ಚಿಕಿತ್ಸೆ ನೀಡಿ ಅವರ ಆರೈಕೆ ಮಾಡಬೇಕಿದೆ. ಅತಿ ಸಣ್ಣ ವಯಸ್ಸಿನಲ್ಲಿ ಈ ನ್ಯೂನತೆ ಸರಿಯಾಗಿ ಗಮನಕ್ಕೆ ಬಾರದೇ ಇದ್ದರೂ, ಮಕ್ಕಳು ಬೆಳೆಯುತ್ತಿದ್ದಂತೆ ಇದರ ಲಕ್ಷಣಗಳು ಗೋಚರಿಸುತ್ತದೆ. ಆ ಸಂದರ್ಭದಲ್ಲೇ ಸಂಬಂಧಪಟ್ಟ ವೈದ್ಯರನ್ನು ಕಾಣುವುದು ಅಗತ್ಯವಾಗಿದೆ. 
ಇದೊಂದು ಮಾನಸಿಕ ಕಾಯಿಲೆ, ಗುಣಮುಖವಾಗುವುದಿಲ್ಲ ಎಂದು ಮಕ್ಕಳನ್ನು ದೂರ ಮಾಡಿದರೆ ಹೆ ತ್ತ ವರು ಮಕ್ಕಳ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಆಟಿಸಂನಿಂದಾಗಿ ಮಕ್ಕಳು ವಿಕಾರವಾಗಿ ವರ್ತಿಸಿದರೂ ಅವರಿಗೆ ಸರಿಯಾದ ಚಿಕಿತ್ಸೆ ಲಭಿಸಿದರೆ ಮುಂದೆ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ. ಎಳೆವೆಯಲ್ಲೇ ಕಾಡುವ ಈ ಸಮಸ್ಯೆ ಮುಂದೆ ಬೆಳೆಯುತ್ತಾ ಪ್ರೌಢಾವಸ್ಥೆಗೆ ತಲುಪಿದ ಅನೇಕ ಉದಾಹರಣೆಗಳನ್ನೂ ಕಾಣಬಹುದು.  

Advertisement

ಇದು ಆಟಿಸಂ ತಿಂಗಳು
ಅಮೆರಿಕದಂತಹ ದೇಶಗಳಲ್ಲಿ ಕೆಲವೊಂದು ಎನ್‌ಜಿಒಗಳು ಸಾಕಷ್ಟು ಖರ್ಚು ಮಾಡಿ ಆಟಿಸಂ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಪ್ರಸ್ತುತ ಭಾರತದಲ್ಲಿ ಎಪ್ರಿಲ್‌ ತಿಂಗಳನ್ನು ಆಟಿಸಂ ಮಂಥ್‌ ಎಂದು ತಿಂಗಳ ಪೂರ್ತಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕಾಗಿಯೇ ಕೆಲವೊಂದು ಕೌನ್ಸೆಲಿಂಗ್‌ ಸೆಂಟರ್‌ಗಳು ಕಾರ್ಯಾಚರಿಸುವ ಮೂಲಕ ಇದನ್ನು ನಿಯಂತ್ರಿಸುವ ಕಾರ್ಯ ಮಾಡುತ್ತಿದೆ. 

ಕಾರಣವೇನು?
ಇದು ಮುಖ್ಯವಾಗಿ ಹೆತ್ತವರ ವರ್ತನೆಯಿಂದ ಕಂಡುಬರುತ್ತದೆ. ವಂಶಪಾರಂಪರ್ಯವಾಗಿಯೂ ಈ ಸಮ ಸ್ಯೆ ಬರುವ ಅಪಾಯ ವಿದ್ದು, ಸುಮಾರು ಹಿಂದಿನ 12 ಜನ್ಮದವರೆಗೆ ಈ  ಕಾಯಿಲೆ ಹರಡುವ ಅಪಾಯವೂ ಇದೆ. ಗರ್ಭಿಣಿಯಾಗಿರುವ ಸಂದರ್ಭದಲ್ಲೇ ಯಾವುದೇ ತೊಂದರೆಗಳು ಕಂಡುಬಂದಿದ್ದರೆ ಮುಂದೆ ಹುಟ್ಟುವ ಮಗುವಿಗೆ ಆಟಿಸಂ ನ್ಯೂನ್ಯತೆ ಕಾಡುವ ಸಾಧ್ಯತೆ ಇದೆ. ಜತೆಗೆ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಅತಿ ಯಾದ ಜ್ವರ, ಸಕ್ಕರೆ ಕಾಯಿಲೆ, ಅಪ ಸ್ಮಾರ ಕಂಡುಬಂದರೂ ಹುಟ್ಟುವ ಮಗುವಿಗೆ ಆಟಿಸಂ ಕಾಡಲಿದೆ.  ಇದು ಎಳವೆಯಲ್ಲೇ ಮಕ್ಕಳಲ್ಲಿ ಕಂಡುಬಂದರೂ ಅಪಾಯ ಇರುತ್ತದೆ. ಜತೆಗೆ ಇಂಥ ಮಕ್ಕಳಿಗೆ ಮೊಬೈಲ್‌, ಟಿವಿ ತೋರಿಸುವುದರಿಂದಲೂ ಅಪಾಯದ ಸಾಧ್ಯತೆ ಅಧಿಕವಾಗಿರುತ್ತದೆ. 

ಕೆಲವೊಂದು ಸಂದರ್ಭದಲ್ಲಿ ಆಟಿಸಂ ಇದೇ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎಂದೂ ಹೇಳುವಂತಿಲ್ಲ. ತಜ್ಞರು ಇದನ್ನು ಆಟಿಸಂ ಸ್ಪೆಕ್ಟ್ರಮ್‌ ಎಂದೂ ಕರೆಯುತ್ತಾರೆ. ಹೆತ್ತವರಲ್ಲಿ  ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿದ್ದರೂ ಮಕ್ಕ ಳ ಲ್ಲಿ ಇಂತಹ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹುಟ್ಟಿದ ಮಕ್ಕಳಲ್ಲೂ ಈ ತೊಂದರೆ 
ಕಾಣಿಸಿಕೊಳ್ಳಬಹುದು.

 ಚಿಕಿತ್ಸೆ ಏನು?
ಸಾಮಾನ್ಯ ಮಕ್ಕಳಿಗೆ ಒಂದೂವರೆ ವರ್ಷಗಳಾಗುತ್ತಲೇ ಮಾತನಾಡುವುದಿಲ್ಲ ಎಂದು ಕಂಡುಬಂದಾಗ ತತ್‌ಕ್ಷಣ ವೈದ್ಯರನ್ನು ಕಾಣುವುದು ಅಗತ್ಯವಾಗಿದೆ. ಈ ವೇಳೆ ವಿಶೇಷ ಔಷಧಗಳನ್ನು ನೀಡಿದಾಗ ಮಕ್ಕಳಲ್ಲಿ ಆಟಿಸಂ ಸಮಸ್ಯೆ ದೂರವಾಗುತ್ತದೆ. 
ಆಟಿಸಂ ನ್ಯೂನತೆಗೆ ಒಳ ಗಾದ ಮಕ್ಕಳಲ್ಲಿ ಮುಖ್ಯವಾಗಿ ಏಕಾಗ್ರತೆ ಇಲ್ಲದಾಗುವುದು, ಅಗತ್ಯಕ್ಕಿಂತ ಹೆಚ್ಚಿನ ಚಟುವಟಿಕೆಗಳನ್ನು ನಡೆಸುವುದು, ಹೇಳಿದ್ದನ್ನೇ ಹೇಳುವುದು, ದೃಷ್ಟಿ ತೊಂದರೆ ಕಂಡು ಬರು ತ್ತದೆ. ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿ ನೀಡುವುದು ಅನಿವಾರ್ಯ. ಇದಕ್ಕಾಗಿ ವಿಶೇಷ ಕೌನ್ಸೆಲಿಂಗ್‌ ಸೆಂಟರ್‌ಗಳು ಕಾರ್ಯಾಚರಿಸುತ್ತಿದ್ದು, ಮಕ್ಕಳಿಗೆ ನಿರಂತರತರ ಬೇತಿ ಲಭಿಸಿದಾಗ ಶೇ. 70ರಿಂದ 80ರಷ್ಟು ನ್ಯೂನತೆಯನ್ನು ಹೋಗ ಲಾ ಡಿ ಸ ಬ ಹುದು. ಇದರ ಜತೆಗೆ ವೈದ್ಯರು ನೀಡುವ ಔಷಧಗಳನ್ನು ಸೇವಿಸುತ್ತ ಬಂದರೆ ಈ ಸಮ ಸ್ಯೆ ಯನ್ನು ಹತೋ ಟಿಗೆ ತರ ಬ ಹುದು ಎನ್ನು ತ್ತಾರೆ ತಜ್ಞರು.

Advertisement

ದೇಹಕ್ಕಾದ ನೋವನ್ನು ನಿಯಂತ್ರಿಸುವ ಮೆದುಳು 
ಸಾಮಾನ್ಯವಾಗಿ ದೇಹಕ್ಕೆ ಗಾಯವಾದಾಗ ನೋವಾಗುವುದು ಸಹಜ. ಆದರೆ ನಾವು ಗಾಯವನ್ನು ನೋಡಿಕೊಂಡು ಅದರ ನೋವಿನ ಪ್ರಮಾಣ ಎಷ್ಟಿರಬಹುದೆಂದು ಅಂದಾಜಿಸುತ್ತೇವೆ. ಆದರೆ ನಮಗಾದ ನೋವಿನ ಪ್ರಮಾಣವನ್ನು ಮೆದುಳು ನಿಯಂತ್ರಿಸುತ್ತದೆ ಎಂಬ ವಿಷಯ ಸಂಶೋಧನೆಯಿಂದ ರುಜುವಾತಾಗಿದೆ. ನಾವು ಗಾಯ ನೋಡಿ ಅದು ದೀರ್ಘಾವಧಿಯೋ ಅಥವಾ ಅಲ್ಪಾವಧಿಯೋ ಎಂದು ಅಂದಾಜಿಸುತ್ತೇವೆ. ಆದರೆ ಇದನ್ನೆಲ್ಲ ನಡೆಸುವುದು ನಮ್ಮ ಮೆದುಳು. ಯುನಿವರ್ಸಿಟಿ ಆಫ್ ಬರ್ಮಿಂಗ್‌ಹ್ಯಾಮ್‌ ನಡೆಸಿದ ಸಂಶೋಧನೆಯಲ್ಲಿ ಮಾನವನ ದೇಹಕ್ಕೆ ಯಾವುದೇ ನೋವಾದಾಗ ಅದು ಬ್ರೈನ್‌ ವೇವ್‌ಗಳನ್ನು ಎಚ್ಚರಿಸಿ ಗಾಯದ ವಿಚಾರದ ಕುರಿತು ಅನಂತರ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಇದರ ಪ್ರಕಾರ ಆಲ್ಫಾ ಬ್ರೈನ್‌ ವೇವ್‌ ಫ್ರೀಕ್ವೆನ್ಸಿ ಕಡಿಮೆ ಇದ್ದರೆ ಅದು ಅಲ್ಪ ಕಾಲಿಕ ನೋವು ಎಂದು ಆಲ್ಫಾ ಬ್ರೈನ್‌ ವೇವ್‌ ಫ್ರೀಕ್ವೆನ್ಸಿ ವೇಗವಾಗಿ ಕೆಲಸ ಮಾಡಿದರೆ ಅದು ದೀರ್ಘಾವಧಿ ನೋವೆಂದು ಪ್ರತ್ಯೇ ಕಿಸುತ್ತದೆ ಎನ್ನುತ್ತಾರೆ ಸಂಶೋಧನಾಕಾರರು. 

ಬಾಲ್ಯದ ಸ್ನೇಹಿತರಿಂದ ಉತ್ತಮ ಆರೋಗ್ಯ
ಬಾಲ್ಯದ ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯುವುದರಿಂದ ಆರೋಗ್ಯವಂತರಾಗಿರಬಹುದು ಎಂಬು ದನ್ನು ಹೊಸ ಅಧ್ಯಯನವೊಂದು ತಿಳಿಸಿದೆ. ಅಲ್ಲದೇ ಹೆಚ್ಚಿನ ಸ್ನೇಹಿತರಿದ್ದರೆ ಅಂತಹವರಿಗೆ ಹೃದ್ರೋಗ, ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ. ದೇಹದ ತೂಕದಲ್ಲೂ ನಿಯಂತ್ರಣ ಹೊಂದಲು ಸಹಕಾರಿಯಾಗುತ್ತದೆ ಎಂಬುದಾಗಿ ಸಂಶೋಧನಾಕಾರರು ತಿಳಿಸಿದ್ದಾರೆ.

ಶೇ. 80ರಷ್ಟು ಸುಧಾರಣೆ ಸಾಧ್ಯ 
ಮಕ್ಕಳಲ್ಲಿ ಆಟಿಸಂ ನರ ದೌರ್ಬಲ್ಯದಿಂದ ಕಂಡುಬರುವ ಕಾಯಿಲೆಯಾಗಿದ್ದು, ನಿರಂತರ ತರಬೇತಿ, ಚಿಕಿತ್ಸೆಯಿಂದ ಈ ತೊಂದರೆಯನ್ನು ಹತೋಟಿಗೆ ತರಲಾಗುತ್ತದೆ. ಎಳವೆಯಲ್ಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ನೀಡಿದರೆ ಸುಮಾರು ಶೇ. 80 ರ ಷ್ಟು ಸುಧಾರಣೆ ಸಾಧ್ಯ. ಮಕ್ಕಳು ವಿಚಿತ್ರವಾಗಿ ವರ್ತಿಸಿದರೆ ಹೆತ್ತ ವರು ಮೂಢನಂಬಿಕೆಗಳಿಗೆ ಬಲಿ ಯಾ ಗದೆ ತಜ್ಞರನ್ನು ಕಾಣುವುದು ಅಗತ್ಯವಾಗಿದೆ.
– ಪೂರ್ಣಿಮಾ ಆರ್‌. ಕೆ. ಭಟ್‌, ಆಟಿಸಂ ಸ್ಪೆಷಲಿಸ್ಟ್‌, ಅರಿವು ಇಂಟರ್‌ವೆನ್ಶನ್‌ ಸೆಂಟರ್‌, ಮಂಗಳೂರು

ಈರುಳ್ಳಿ, ಬೆಲ್ಲ
ಕಫ‌ ಉಂಟಾಗಿ ಗಂಟಲು ಕಟ್ಟಿ  ಕೆಮ್ಮು ಬರುತ್ತಿದ್ದರೆ ಹಸಿ ಯಾದ ಈರುಳ್ಳಿಯನ್ನು  ಬೆಲ್ಲದೊಂದಿಗೆ ಬೆರೆಸಿ ಜಗಿದು ತಿಂದರೆ ಕಡಿಮೆಯಾಗುವುದು.

ಉಪ್ಪು ನೀರು
ಧೂಳಿ ನಿಂದ ಪಾದಗಳು ಒಡೆದು ತುರಿಕೆಯಾಗುತ್ತಿದ್ದರೆ ರಾತ್ರಿ ಮಲಗುವ ಮುಂಚೆ 1- 2 ಚಮಚ ಉಪ್ಪು ಬೆರೆಸಿದ ಅರ್ಧ ಬಕೆಟ್‌ ನೀರಿನಲ್ಲಿ ಪಾದವನ್ನು 10- 15 ನಿಮಿಷ ಮುಳುಗಿಸಿ ತೆಗೆದು, ಬಟ್ಟೆಯಿಂದ ಒರೆಸಿ ತೆಂಗಿನ ಎಣ್ಣೆಯನ್ನು ಹಚ್ಚಿ. ಕೆಲವು ದಿನಗಳ ಕಾಲ ಹೀಗೆ ಮಾಡುವುದ ರಿಂದ ಪಾದಗಳು ಸ್ವತ್ಛವಾಗಿ ಹಿಮ್ಮಡಿ ಒಡೆಯುವುದು ಕಡಿಮೆ ಯಾಗುವುದು.

 ಕಿರಣ್‌  ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next