Advertisement

ಅತೀಕ್ ಅಹ್ಮದ್ ಗೆ ಪಾಕ್ ISI ಸಂಪರ್ಕವಿತ್ತು ; ಶಸ್ತ್ರಾಸ್ತ್ರಗಳನ್ನೂ ಪಡೆದಿದ್ದರು!

10:35 PM Apr 16, 2023 | Team Udayavani |

ನವದೆಹಲಿ: ಶನಿವಾರ ರಾತ್ರಿ ಪೊಲೀಸರ ಸಮ್ಮುಖದಲ್ಲೇ ಮೂವರು ಶೂಟರ್‌ಗಳ ಗುಂಡಿಗೆ ಬಲಿಯಾದ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್‌ಗೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಂಪರ್ಕ ಇರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಐಎಸ್ 227 ಗ್ಯಾಂಗ್‌ನ ನಾಯಕ ಮತ್ತು ಸಹೋದರ ಅಶ್ರಫ್ ಅದರ ಸಕ್ರಿಯ ಸದಸ್ಯರಾಗಿದ್ದರು ಎಂದು ಹೇಳಿದ್ದಾರೆ.

Advertisement

ತನಗೆ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಐಎಸ್‌ಐ ಜೊತೆ ಸಂಪರ್ಕವಿದೆ ಮತ್ತು ಪಂಜಾಬ್‌ನಲ್ಲಿ ಪಾಕಿಸ್ಥಾನಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದಿರುವುದಾಗಿ ಅತೀಕ್ ಹೇಳಿಕೆಯಲ್ಲಿ ತಿಳಿಸಿದ್ದ ಎಂದು ಹೇಳಿದ್ದಾರೆ.

ಶಸ್ತ್ರಾಸ್ತ್ರಗಳನ್ನು ತಲುಪಿಸಿದವರ ವಿಳಾಸ ತಮಗೆ ತಿಳಿದಿತ್ತು ಆದರೆ ಜೈಲಿನಿಂದ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಮತ್ತು ಅವರು ಸ್ಥಳಕ್ಕೆ ತಲುಪಿದರೆ ಮಾತ್ರ ಹೇಳಲು ಸಾಧ್ಯವಾಗುತ್ತದೆ ಎಂದು ಅತೀಕ್ ಮತ್ತು ಅಶ್ರಫ್ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಉಮೇಶ್ ಪಾಲ್ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಪಾಕ್ ಮೂಲದ ಏಜೆನ್ಸಿಗಳಿಂದ ಪಡೆದದ್ದಾಗಿದ್ದವು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next