Advertisement

Atiq-Ashraf Case; ಅತೀಕ್‌ಗೆ ತಗುಲಿದ್ದು 9 ಗುಂಡುಗಳು;ಮರಣೋತ್ತರ ಪರೀಕ್ಷೆ ವರದಿ ಬಹಿರಂಗ

01:39 AM Apr 18, 2023 | Team Udayavani |

ಲಕ್ನೋ: ಕುಖ್ಯಾತ ಡಾನ್‌ಗಳಾಗಿದ್ದ ಅತೀಕ್‌ ಅಹ್ಮದ್‌ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದೆ. ಅತೀಕ್‌ ಅಹ್ಮದ್‌ ದೇಹದಲ್ಲಿ ಒಟ್ಟು 9 ಗುಂಡುಗಳು ಇದ್ದವು. ಒಂದು ಗುಂಡು ತಲೆಗೆ ಹಾಗೂ 8 ಗುಂಡುಗಳು ಎದೆ ಮತ್ತು ಬೆನ್ನಿಗೆ ಹೊಕ್ಕಿತ್ತು. ಇದೇ ವೇಳೆ ಅಶ್ರಫ್ ಅಹ್ಮದ್‌ನ ದೇಹದಲ್ಲಿ ಐದು ಗುಂಡುಗಳು ಇದ್ದವು. ಅಶ್ರಫ್ ಮುಖಕ್ಕೆ ಒಂದು ಗುಂಡು ಮತ್ತು ಬೆನ್ನಿಗೆ ನಾಲ್ಕು ಗುಂಡು ಗಳು ಹೊಕ್ಕಿತ್ತು. ಐದು ಮಂದಿ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತ್ತು.

Advertisement

ಎಸ್‌ಐಟಿ ತಂಡ ರಚನೆ: ಹತ್ಯೆ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸ್‌ ಮೂರು ಸದ ಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಪ್ರಯಾಗ್‌ರಾಜ್‌ ನಗರ ಪೊಲೀಸ್‌ ಆಯುಕ್ತರ ಸಲಹೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಭದ್ರತೆ ಹಿನ್ನೆಲೆಯಲ್ಲಿ ಲವಲೇಶ್‌ ಸಿಂಗ್‌, ಸನ್ನಿ ಸಿಂಗ್‌ ಮತ್ತು ಅರುಣ್‌ ಮೌರ್ಯರನ್ನು ನೈನಿ ಕೇಂದ್ರ ಕಾರಾಗೃಹದಿಂದ ಪ್ರತಾಪ್‌ಗ್ಢ ಜೈಲಿಗೆ ಸ್ಥಳಾಂ ತರಿಲಾಗಿದೆ. ಮೃತ ಅತೀಕ್‌ ಅಹ್ಮದ್‌ನ ಊರಾದ ಪ್ರಯಾಗ್‌ರಾಜ್‌ ಸಮೀಪದ ಕಸರಿ-ಮಸರಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಅಲ್ಲಿ ಇನ್ನೂ ಬಿಗಿ ಪೊಲೀಸ್‌ ಬಂದೋಬಸ್ತ್ ಮುಂದುವರಿಸ ಲಾಗಿದೆ. ಜತೆಗೆ ಇಂಟರ್ನೆಟ್‌ ಸ್ಥಗಿತ ಮುಂದುವರಿದಿದೆ. ಉಳಿದ ಪ್ರದೇಶಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ.

ಪಿಐಎಲ್‌ ಸಲ್ಲಿಕೆ: ಎ.15ರಂದು ನಡೆದಿದ್ದ ಅತೀಕ್‌, ಅಶ್ರಫ್ ಅಹ್ಮದ್‌ ಹತ್ಯೆ ಪ್ರಕರಣ ಸಹಿತ ಉತ್ತರ ಪ್ರದೇಶದಲ್ಲಿ ನಡೆದ ಒಟ್ಟು 183 ಎನ್‌ಕೌಂಟರ್‌ಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next