Advertisement

ಆತ್ಮನಿರ್ಭರ ಭಾರತ ಸಂಕಲ್ಪ ಸಾಕಾರಗೊಳಿಸಿ: ಅಂಗಡಿ

03:04 PM Jul 11, 2020 | Suhan S |

ಬೆಳಗಾವಿ: ಕೋವಿಡ್ ಮಹಾ ಮಾರಿಯಿಂದಾಗಿ ದೇಶವು ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಈಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತಕ್ಕೆ ಪಣ ತೊಟ್ಟು ದೇಶದ ಜನರ ಎದುರು ಅವಕಾಶಗಳನ್ನು ತೆರೆದಿಟ್ಟಿದೆ. ಈ ಹಿನ್ನಲೆಯಲ್ಲಿ ದೇಶದ ಜನತೆ, ಅದರಲ್ಲೂ ಮುಖ್ಯವಾಗಿ ಯುವಜನತೆ ಆತ್ಮನಿರ್ಭರ ಭಾರತ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೋಕಲ್‌ ಟು ಲೋಕಲ್‌, ಲೋಕಲ್‌ ಟು ಗ್ಲೋಬಲ್‌ ಎನ್ನುವ ಉದ್ದೇಶವನ್ನು ಸಾಕಾರಗೊಳಿಸಲು ಯುವಜನತೆ ಮುಂದೆ ಬರಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ನೆರವು ಘೋಷಿಸಿದೆ. ರೈಲ್ವೆ, ಕೃಷಿ, ತೋಟಗಾರಿಕೆ, ಹೈನೋದ್ಯಮ, ಸಣ್ಣ ಕೈಗಾರಿಕೆ ಸೇರಿ ಹಲವು ವಲಯಗಳಲ್ಲಿ ಸ್ವಯಂ ಉದ್ಯೋಗಕ್ಕೆನ ಅವಕಾಶಗಳ ಬಾಗಿಲು ತೆರೆದಿದೆ. ಯುವಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ಕೋವಿಡ್‌-19 ದಿಂದಾಗಿ ಭಾರತ ಈಗ ಹೊರಳು ಹಾದಿಯಲ್ಲಿದೆ. ಗ್ರಾಮ, ಬಡವ ಮತ್ತು ರೈತನನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 80 ಕೋಟಿ ಜನರಿಗೆ ಕೋವಿಡ್ ಸಂಕಟದ ಸಮಯದಲ್ಲಿ ಉಚಿತವಾಗಿ ನವೆಂಬರ್‌ವರೆಗೆ ಅಕ್ಕಿ, ಬೇಳೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಸ್ವಯಂ ಬದುಕು ಕಟ್ಟಿಕೊಳ್ಳುವ ಜತೆಗೆ ದೇಶದ ಅಭ್ಯುದಯಕ್ಕಾಗಿ ದುಡಿಯಬೇಕಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next