Advertisement

ಕ್ರೀಡಾ ಸಾಧಕನಿಗೆ ಬೇಕಿದೆ ಆರ್ಥಿಕ ನೆರವು

12:00 PM Oct 19, 2019 | Team Udayavani |

ಧಾರವಾಡ: ಈತ ಅಪ್ಪಟ ದೇಶಿ ಪ್ರತಿಭೆ. ಟಾಟಾ ಮಾರ್ಕೋಪೋಲೋ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕ. ಸಾಧನೆಯೋ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿ ನಿಂತಿದೆ. ಆದರೆ, ಸಾಧನೆಗೆ ಇದೀಗ ಆರ್ಥಿಕ ಸಂಕಷ್ಟ ಅಡ್ಡವಾಗಿದೆ. ದುಬೈ ಹಾಗೂ ಮಲೇಷ್ಯಾದಲ್ಲಿ ನಡೆಯಲಿರುವ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಹೊರಟ ಈ ಕ್ರೀಡಾಪಟುವಿಗೆ ಆರ್ಥಿಕ ನೆರವಿನ ಹಸ್ತ ಬೇಕಿದೆ.

Advertisement

ವಿಜಯಪುರದ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ಮಲ್ಲಪ್ಪ ಪೂಜೇರಿ ಐಟಿಐ ಶಿಕ್ಷಣ ಪಡೆದು ಧಾರವಾಡದ ಟಾಟಾ ಮಾರ್ಕೋಪೋಲೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಧಾರವಾಡ ನಗರದ ಮೆಣಸಿನಕಾಯಿ ಓಣಿಯಲ್ಲಿ ನೆಲೆಸಿದ್ದಾರೆ. 2019, ಅ.10ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಮ್ಯಾರಥಾನ್‌ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕ ಪಡೆದಿದ್ದು, ಈವರೆಗೆ 30ಕ್ಕೂ ಹೆಚ್ಚು ಪದಕ ಗಳಿಸಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದು ಬಂದ ಮಲ್ಲಪ್ಪ ಕೆಲಸ ಮಾಡುತ್ತಲೇ ಕ್ರೀಡೆಯಲ್ಲಿ ಸಾಧನೆ ಮಾಡಲು ಕಷ್ಟಪಟ್ಟಿದ್ದಾರೆ. ಯಾರ ಬಳಿಯೂ ತರಬೇತಿ ಪಡೆಯದೇ ಸ್ವಯಂ ಸಾಧನೆ ಮಾಡಿರುವ ಮಲ್ಲಪ್ಪ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ.

ಇದೀಗ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ದುಬೈ ಹಾಗೂ ಮಲೇಷ್ಯಾದಲ್ಲಿ ನಡೆಯುವ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಲಭಿಸಿದ್ದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಇವರಿಗೆ ದಾನಿಗಳಿಂದ ಆರ್ಥಿಕ ನೆರವು ಬೇಕಾಗಿದೆ. ನೆರವು ನೀಡಲು ಬಯಸುವವರು ಮೊ: 8971092023 ಸಂಪರ್ಕಿಸಬಹುದು. ಇಲ್ಲವೇ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ (ಭಾರತೀಯ ಸ್ಟೇಟ್‌ ಬ್ಯಾಂಕ್‌ ಅಕೌಂಟ್‌ ನಂ-30693375841, ಐಎಫ್‌ಎಸ್‌ಸಿ ನಂ-ಖಆಐN0011272) ಹಣ ಜಮೆ ಮಾಡಬಹುದು.

ಗೆಳೆಯರ ಸಹಕಾರದಿಂದ ಹೊರ ರಾಜ್ಯಗಳಿಗೆ ಹೋಗಿ ಸ್ಪರ್ಧಿಸಲು ಸಾಧ್ಯವಾಗಿದ್ದು, ಇದಲ್ಲದೇ ಶ್ರೀಲಂಕಾ ದೇಶಕ್ಕೂ ಹೋಗಿ ಬೆಳ್ಳಿ ಪದಕ ತಂದಿರುವೆ. ಇದೇ ವರ್ಷ ನೇಪಾಳಕ್ಕೆ ಹಣದ ವ್ಯವಸ್ಥೆ ಆಗದೇ ಕೈ ಬಿಡಬೇಕಾಯಿತು. ಸದ್ಯ ದುಬೈ, ಮಲೇಷ್ಯಾದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ತರುವ ವಿಶ್ವಾಸವಿದ್ದು, ವಿದೇಶಕ್ಕೆ ತೆರಳಲು ಹಣದ ಅಡಚಣೆ ಉಂಟಾಗಿದೆ. ಮಲ್ಲಪ್ಪ ಪೂಜೇರಿ, ರಾಷ್ಟ್ರಪಟ್ಟದ ಕ್ರೀಡಾಪಟು

Advertisement

Udayavani is now on Telegram. Click here to join our channel and stay updated with the latest news.

Next