Advertisement

ವಿದ್ಯುತ್‌ ಪೋಲು ಮಾಡದಿರಿ: ಬಹುರೂಪಿ

12:50 PM Aug 01, 2019 | Naveen |

ಅಥಣಿ: ಗ್ರಾಹಕರು ವಿದ್ಯುತ್‌ನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಶೇಖರ ಬಹುರೂಪಿ ಸಲಹೆ ನೀಡಿದರು.

Advertisement

ಹೆಸ್ಕಾಂ ಇಲಾಖೆ ಸಭಾಭವನದಲ್ಲಿ ಪಟ್ಟಣದ ವಿದ್ಯುತ್‌ ಗ್ರಾಹಕರಿಗಾಗಿ ವಿದ್ಯುತ್‌ ಸುರಕ್ಷತಾ ಹಾಗೂ ಉಳಿತಾಯದ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ತೋಟದ ವಸತಿಗಳಲ್ಲಿ ಸತತವಾಗಿ 24 ಗಂಟೆ ವಿದ್ಯುತ್‌ ನೀಡಲು ನೂತನವಾಗಿ ನ್ಯೂಮೆರಿಕಲ್ ರಿಲೇ ಪ್ರೊಜೆಕ್ಟ್ ಅಳವಡಿಸಿ ಆ. 1ರಿಂದ ಪ್ರಾರಂಭಿಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ವಿಜಯಕುಮಾರ ಅಡಹಳ್ಳಿ ಮಾತನಾಡಿ, ಪಟ್ಟಣದ ತೋಟ ಪಟ್ಟಿಗಳಲ್ಲಿ ಹಾಗೂ ಪಟ್ಟಣದ ಕೆಲ ಬಡಾವಣೆಗಳಲ್ಲಿ ವಿದ್ಯುತ್‌ ತಂತಿ ಹಾಗೂ ಕಂಬಗಳು ಕೆಳಗೆ ವಾಲಿವೆ. ದುರ್ಘ‌ಟನೆ ನಡೆಯುವ ಮುನ್ನ ಹೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ, ಎಸ್‌.ಓ. ಮಲಕಪ್ಪ ಜಾಲಿಬೆಂಚಿ, ಜಿ.ಟಿ.ನರೆಗಲ್ಲ, ಆರ್‌.ಎಸ್‌.ಸ್ವಾಮಿ, ರಮೇಶ ಬಾದವಾಡಗಿ ಬಸನಗೌಡ ಪಾಟೀಲ, ಆರ್‌.ಎಚ್.ಕಲಾರಿ, ಶಬ್ಬೀರ ಸಾತಬಚ್ಚೆ, ಮಂಜು ಹೋಳಿಕಟ್ಟಿ ಇದ್ದರು. ಶ್ರೀಧರಮೂರ್ತಿ ನಿರೂಪಿಸಿದರು. ಅಶೋಕ ವಾಲಿಕರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next