ಸಿಂಧನೂರು : ತುಂಗಭದ್ರಾ ಎಡದಂಡೆ ಕಾಲುವೆಗೆ ಏ.10ರತನಕವೂ ನೀರು ಹರಿಸಲಿದ್ದು, ರೈತರಲ್ಲಿ ಗೊಂದಲ ಬೇಡ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.11ರಿಂದ ಏ.20ರವರೆಗೆ ಕುಡಿವ ನೀರಿನ ಉದ್ದೇಶಕ್ಕೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತದೆ. ಈ ಹಂತದಲ್ಲಿ ನೀರಿನ ಕೆರೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಯಾರೂ ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುವುದು ಬೇಡ. ಜೋಳ ಖರೀದಿ ಪ್ರಕ್ರಿಯೆಯೂ ಮಾ.31ಕ್ಕೆ ಮುಕ್ತಾಯವಾಗಲಿತ್ತು.
ಆದರೆ, ಈ ಕುರಿತು ಇಲಾಖೆ ಮುಖಸ್ಥರೊಂದಿಗೆ ಚರ್ಚಿಸಿ, ಅವ ಧಿಯನ್ನು ಏಪ್ರಿಲ್ ಕೊನೆಯತನಕ ವಿಸ್ತರಣೆ ಮಾಡಲಾಗಿದೆ. ಭತ್ತ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿರುವ ಎಲ್ಲ ರೈತರ ಜೋಳ ಖರೀದಿಸಲಾಗುತ್ತದೆ. ಅನಗತ್ಯ ಭಯ ಬೇಡ ಎಂದರು.
ಔಪಚಾರಿಕ ಚರ್ಚೆ: ನಗರಸಭೆ ಸದಸ್ಯರು ರಸ್ತೆಗೆ ಮರಂ ಹಾಕುವ ಕೆಲಸಕ್ಕಾಗಿ 50-60 ಲಕ್ಷ ರೂ. ಅನುದಾನ ಕೇಳಿಕೊಂಡು ನನ್ನನ್ನು ಭೇಟಿ ಮಾಡಿದ್ದರು. ಔಪಚಾರಿಕವಾಗಿ ಚರ್ಚೆ ಮಾಡುವ ವೇಳೆ ಕೆಲವು ಸಂಗತಿ ಹಂಚಿಕೊಳ್ಳಲಾಗಿತ್ತು. ಆದರೆ, ನಗರ ಪ್ರದೇಶದ ಜನರಿಗೆ ತಾರತಮ್ಯ ಅನುಸರಿಸುವ ನಿಲುವು ನನ್ನದಾಗಿರಲಿಲ್ಲ. ಆ ರೀತಿ ಹೇಳಿಯೂ ಇಲ್ಲ. ಸಿಂಧನೂರು ನಗರ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಈ ಅವ ಧಿಯಲ್ಲಿ ಬರೋಬ್ಬರಿ 60 ಕೋಟಿ ರೂ. ಅನುದಾನ ಕೊಟ್ಟಿರುವೆ. ಮಂತ್ರಿ ಸ್ಥಾನ ಇನ್ನೊಂದು ಆರೇಳು ತಿಂಗಳು ಕಾಲ ಉಳಿದಿದ್ದರೆ, ಮತ್ತಷ್ಟೂ ಅನುದಾನ ತರಲಾಗುತ್ತಿತ್ತು.
ನಮಗೆ ಬರಬೇಕಿದ್ದ 25 ಕೋಟಿ ರೂ.ಗೂ ತಡೆ ಬಿದ್ದಿದೆ. ನಗರ ಭಾಗಕ್ಕೆ ಅನುದಾನ ನೀಡುವಲ್ಲಿ ಯಾವುದೇ ನಿಷ್ಕಾಳಜಿ ತೋರಿಲ್ಲ. ಆರ್‌ಡಿಪಿಆರ್, ಪಿಡಬುÉಡಿ ಸೇರಿದಂತೆ ಕೆಲವು ಇಲಾಖೆ ಮೂಲಕ ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರದೇಶ ವ್ಯಾಪ್ತಿ ಆಧರಿಸಿ ಹೆಚ್ಚಿನ ಕೆಲಸಗಳಾಗಿರಬಹುದು ಎಂದರು.
ಮಾಜಿ ಶಾಸಕ ಹಂಪನಗೌಡರ ಅವ ಧಿಯಲ್ಲಿ ವಸತಿ ಉದ್ದೇಶಕ್ಕೆ ಖರೀದಿಸಿದ ಯಾವುದೇ ಜಮೀನುಗಳು ಸರಿಯಾಗಿಲ್ಲ. ಹಳ್ಳದಲ್ಲಿ ಖರೀದಿ ಮಾಡಿದ್ದರಿಂದ ಆ ಭೂಮಿ ವಾಸಕ್ಕೆ ಯೋಗ್ಯವಲ್ಲ ಎಂದು ಎಂಜಿನಿಯರ್ ವರದಿ ನೀಡಿದ್ದಾರೆ. ಬಪ್ಪೂರು ರಸ್ತೆಯಲ್ಲಿ ಖರೀದಿಸಲಾದ ಭೂಮಿಗೆ ರಸ್ತೆಯಿಲ್ಲ. ಅವರ ಕಾಲದಲ್ಲಿ ರಸ್ತೆ ಕುರಿತು ಆಗಿದ್ದ ಮಾತುಕತೆಯಲ್ಲಿ ಉಂಟಾದ ಗೊಂದಲದಿಂದ ಅಲ್ಲಿಯೂ ಸಮಸ್ಯೆಯಾಗಿದೆ. ಮಾಜಿ ಶಾಸಕ ಹಂಪನಗೌಡರ ಅವ ಧಿಯಲ್ಲಿ ಯಾವುದೇ ಶುದ್ಧ ಕೆಲಸಗಳಾಗಿಲ್ಲ ಎಂದು ಟೀಕಿಸಿದರು. ಈ ವೇಳೆ ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಮುಖಂಡರಾದ ಬಿ. ಹರ್ಷ, ಧರ್ಮನಗೌಡ ಮಲ್ಕಾಪುರ, ಎಂ.ಡಿ. ನದಿಮುಲ್ಲಾ, ಡಿ. ಸತ್ಯನಾರಾಯಣ ದಾಸರಿ, ಅಶೋಕ ಉಮಲೂಟಿ, ಅಶೋಕಗೌಡ ಇತರರು ಇದ್ದರು.