Advertisement

ಕೃಷ್ಣಾ, ತುಂಗಭದ್ರೆಯಲ್ಲಿ ಅಟಲ್‌ ಚಿತಾಭಸ್ಮ ಲೀನ

10:35 AM Aug 26, 2018 | Team Udayavani |

ಶಿವಮೊಗ್ಗ/ಬಾಗಲಕೋಟೆ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಶನಿವಾರ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಹಾಗೂ ತುಂಗಾ-ಭದ್ರಾನದಿಗಳ ಸಂಗಮ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ವಿಸರ್ಜಿಸಲಾಯಿತು.

Advertisement

ಬೆಂಗಳೂರಿನಿಂದ ವಿಶೇಷ ಕಳಶದಲ್ಲಿ ತರಲಾಗಿದ್ದ ಅಟಲ್‌ ಚಿತಾಭಸ್ಮವನ್ನು ಶುಕ್ರವಾರ ಬಾಗಲಕೋಟೆ ನಗರದಲ್ಲಿ ಇಡೀ ದಿನ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಶನಿವಾರ ಬೆಳಗ್ಗೆ ಬಾಗಲಕೋಟೆಯಿಂದ ಮೆರವಣಿಗೆ ಮೂಲಕ ಕೃಷ್ಣಾ ನದಿ ದಡಕ್ಕೆ ತರಲಾಯಿತು. ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎರಡು ನಿಮಿಷ ಮೌನ ಆಚರಿಸಿ, ಕೃಷ್ಣಾ ನದಿಯಲ್ಲಿ ವಿಸರ್ಜಿಸಲಾಯಿತು.

ಇದೇ ವೇಳೆ, ಶಿವಮೊಗ್ಗದಲ್ಲಿಯೂ ಶನಿವಾರ ಅಸ್ಥಿಯ ಮೆರವಣಿಗೆ ನಡೆಸಿ, ತುಂಗಭದ್ರಾ ನದಿಗಳು ಸೇರುವ ಸಂಗಮ ಸ್ಥಳ ಕೂಡಲಿಗೆ ತಂದು ವಿಸರ್ಜನೆ ಮಾಡಲಾಯಿತು. ಈ ವೇಳೆ, ಡಿ.ಎಚ್‌.ಶಂಕರಮೂರ್ತಿ, ಬಿ.ವೈ.ರಾಘವೇಂದ್ರ, ಕೆ.ಎಸ್‌.ಈಶ್ವರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next