Advertisement

ಜಗತ್ತಿನ ಅತೀ ಉದ್ದದ ಅಟಲ್‌ ಸುರಂಗಕ್ಕೆ ವಿಶ್ವದಾಖಲೆ ಗೌರವ

10:34 PM Feb 10, 2022 | Team Udayavani |

ನವದೆಹಲಿ: ಹಿಮಾಚಲಪ್ರದೇಶದಲ್ಲಿ ಬಿಆರ್‌ಒ (ಗಡಿ ರಸ್ತೆ ನಿರ್ಮಾಣ ಸಂಸ್ಥೆ) ನಿರ್ಮಿಸಿರುವ ಅಟಲ್‌ ಸುರಂಗ ಮಾರ್ಗ ವಿಶ್ವದಾಖಲೆ ನಿರ್ಮಿಸಿದೆ.

Advertisement

10,000 ಅಡಿಗಿಂತ ಎತ್ತರದಲ್ಲಿರುವ ಅತಿ ದೀರ್ಘ‌ ಹೆದ್ದಾರಿ ಸುರಂಗ ಮಾರ್ಗ ಎಂಬ ದಾಖಲೆ ಸ್ಥಾಪಿಸಿದೆ.

ಇಂಗ್ಲೆಂಡ್‌ನ‌ ವರ್ಲ್ಡ್ ಬುಕ್‌ ಆಫ್ ರೆಕಾರ್ಡ್ಸ್ ಈ ಕುರಿತ ದಾಖಲೆಗಳನ್ನು ಬಿಆರ್‌ಒ ಪ್ರಧಾನ ನಿರ್ದೇಶಕ ಲೆ.ಜ.ರಾಜೀವ್‌ ಚೌಧರಿಗೆ ಹಸ್ತಾಂತರಿಸಿದೆ.

2020, ಅ.3ರಂದು ಪ್ರಧಾನಿ ನರೇಂದ್ರ ಮೋದಿ 9.02 ಕಿ.ಮೀ. ದೂರದ ಈ ಸುರಂಗವನ್ನು ಲೋಕಾರ್ಪಣೆ ಮಾಡಿದ್ದರು. ಇದು ಹಿಮಾಚಲದ ಮನಾಲಿ ಮತ್ತು ಲಾಹೌಲ್‌-ಸ್ಪಿತಿಗಳನ್ನು ಬೆಸೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next