Advertisement

ಆದರ್ಶ್‌ ಫ್ರೆಂಡ್ಸ್‌  ಅಂಬಾಗಿಲು ತಂಡಕ್ಕೆ ಅಟಲ್‌ ಟ್ರೋಫಿ

11:14 PM Dec 25, 2022 | Team Udayavani |

ಉಡುಪಿ: ಬಿಜೆಪಿ ಉಡುಪಿ ನಗರ, ಗ್ರಾಮಾಂತರ ವತಿಯಿಂದ ಅಟಲ್‌ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಪ್ರಯುಕ್ತ ಎಂಜಿಎಂ ಮೈದಾನದಲ್ಲಿ ನಡೆದ “ಅಟಲ್‌ ಉತ್ಸವ’ದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಪ್ರೊ ಕಬಡ್ಡಿ ಪಂದ್ಯಾಟ “ಅಟಲ್‌ ಟ್ರೋಫಿ -2022′ ಆದರ್ಶ್‌ ಫ್ರೆಂಡ್ಸ್‌ ಅಂಬಾಗಿಲು ಪಾಲಾಯಿತು. ಮಹಿಳಾ ವಿಭಾಗದಲ್ಲಿ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್‌ ಜಯಿಸಿತು.

Advertisement

ಪುರುಷರ ವಿಭಾಗದಲ್ಲಿ ಬೆಂಗ ಳೂರು ಬ್ಯಾಂಕ್‌ ಆಫ್ ಬರೋಡ ಪ್ರಾಯೋಜಿತ ಒಂದು ಲಕ್ಷ ರೂ., ನಗದು ಬಹುಮಾನ ಮತ್ತು ಅಟಲ್‌ ಟ್ರೋಫಿಯನ್ನು ಆದರ್ಶ್‌ ಫ್ರೆಂಡ್ಸ್‌ ಅಂಬಾಗಿಲು ತನ್ನದಾಗಿಸಿಕೊಂಡಿತು. ರನ್ನರ್ ಅಪ್‌ ಸ್ಥಾನ ಪಡೆದ ಮಾಲ್ಗುಡಿ ಗ್ಲ್ಯಾಡಿಯೇಟರ್ಸ್‌ ಬ್ರಹ್ಮಾವರ ತಂಡವು ಮಹಾರಾಷ್ಟ್ರ ಹಿಂದೂಜ ಹಾಸ್ಪಿಟಲ್ಸ್‌ ಪ್ರಾಯೋಜಿತ 75 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ, ತೃತೀಯ ಸ್ಥಾನ ಪಡೆದ ಆಳ್ವಾಸ್‌ ಮೂಡುಬಿದಿರೆ ತಂಡವು ಗುರ್ಮೆ ಫೌಂಡೇಶನ್‌ ಪ್ರಾಯೋಜಿತ 50 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ, 4ನೇ ಸ್ಥಾನಿ ಹರ್ಯಾಣ ತಂಡವು ಬಾಲಾಜಿ ವೆಂಚರ್ಸ್‌ ಪ್ರಾಯೋಜಿತ 25 ಸಾವಿರ ರೂ. ನಗದು ಬಹುಮಾನ, ಟ್ರೊಫಿ ಪಡೆದುಕೊಂಡಿತು.

ಮಹಿಳಾ ವಿಭಾ ಗ ದಲ್ಲಿ ತೆಂಕನಿಡಿ ಯೂರು ಸ್ಪೋರ್ಟ್ಸ್ ಕ್ಲಬ್‌ ಚಾಂಪಿ ಯನ್‌ ಪಟ್ಟದೊಂದಿಗೆ 20 ಸಾವಿರ ರೂ. ನಗದು ಬಹುಮಾನ, ರನ್ನರ್ ಅಪ್‌ ಎಸ್‌ಡಿಎಂ ಉಜಿರೆ 15 ಸಾವಿರ ರೂ. ನಗದು ಬಹುಮಾನ ಪಡೆದವು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್‌, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ವಿ. ನಾಯ್ಕ, ಕಾರ್ಯಕ್ರಮ ಸಂಚಾಲಕ ಗಿರೀಶ್‌ ಅಂಚನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next