Advertisement
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಟಲ್ ಭೂಜಲ ಯೋಜನೆ ಜಾರಿಗೆ ಚಾಲನೆ ನೀಡಿ ಮಾತನಾಡಿ ದ ಅವರು, ನೀರು ಜಗತ್ತಿನ ಜೀವ ಸಂಕುಲಗಳ ಇರುವಿಕೆಗೆ ಅತ್ಯಗತ್ಯ ಮೂಲ ವಸ್ತು. ನೀರಿನ ಬಳಕೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಪ್ರಥಮ ಪ್ರಶಸ್ತ್ಯ ನೀಡಬೇಕು ಎಂದು ಹೇಳಿ ದರು. ಭೂಮಿ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ ಶೇ.2.50 ಸಿಹಿ ನೀರು ಲಭ್ಯವಿದ್ದು, ಶೇ.0.30 ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ.
Related Articles
Advertisement
ಜೆ.ಸಿ.ಮಾಧುಸ್ವಾಮಿ ಚಾಲನೆ: ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ರಾಜ್ಯ ಮಟ್ಟ ದಲ್ಲಿ ಯೋಜನೆ ಉದ್ಘಾಟಿಸಿದರು. ಜಿಪಂ ಭವನದಲ್ಲಿ ಉದ್ಘಾಟನೆ ಸಂದರ್ಭದ ನೇರ ಪ್ರಸಾರಕ್ಕೆ ವ್ಯವ ಸ್ಥೆ ಮಾಡಲಾಗಿತ್ತು. ಜೆಸಿಎಂ ಯೋಜನೆ ಉದ್ಘಾಟಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಕಾರ್ಯ ಕ್ರಮ ಆರಂಭ ವಾಯಿತು. ಹಿರಿಯ ಭೂ ವಿಜಾnನಿ ರಾಜಶ್ರೀ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್, ಜಿಲ್ಲಾ ಉದ್ಯೋಗಾಧಿಕಾರಿ ಶಿವಮೂರ್ತಿ ಉಪಸ್ಥಿತರಿದ್ದರು.
30 ಗ್ರಾಮಗಳಿಗೆ ಯೋಜನೆ :
ಜಿಲ್ಲೆಯಲ್ಲಿ ಕನಪುರ ತಾಲೂಕಿನ ಅರೆಕಟ್ಟೆ ದೊಡ್ಡಿ, ಚೊಡಹಳ್ಳಿ, ಕಬ್ಟಾ ಳು, ಚಾಕನಹಳ್ಳಿ, ಅರಕೆರೆ, ದೊಡ್ಡ ಮರಳವಾಡಿ, ಯಲಚನವಾಡಿ, ಹೆರಿಂದ್ಯಾಪ್ಪನಹಳ್ಳಿ, ಕೋಳಗೊಂಡನಹಳ್ಳಿ, ಬನವಾಸಿ, ಹುಣಸನಹಳ್ಳಿ, ಕೊಡಿಹಳ್ಳಿ, ತೋಕಸಂದ್ರ, ಅಚಲು, ಬುದಿಗುಪ್ಪೆ, ಹೊನ್ನಿಗನಹಳ್ಳಿ, ಹೊಸದುರ್ಗ, ಹೂಕುಂದ, ನಾರಾಯಣಪುರ, ಸಾತನೂರು, ಶಿವನಹಳ್ಳಿ, ಟಿ.ಬೇಕುಪ್ಪೆ, ಹಳ್ಳಿಮಾರನಹಳ್ಳಿ, ಕಗ್ಗಲಹಳ್ಳಿ, ಟಿ.ಹೊಸಹಳ್ಳಿ, ಬನ್ನಿಮುಕೂಡೂ, ದ್ಯಾವಸಂದ್ರ, ಕಲ್ಲಹಳ್ಳಿ, ಸೊಮಂದ್ಯಾಪನಹಳ್ಳಿ, ತುಂಗಣಿ ಸೇರಿದಂತೆ ಒಟ್ಟು 30 ಗ್ರಾಮವನ್ನು ಯೋಜನೆಗೆ ಗುರಿತಿಸಲಾಗಿದೆ. ರಾಮನಗರ ತಾಲೂಕಿನ ಅಕ್ಕೂರು, ದೊಡ್ಡಂಗನವಾಡಿ, ಹರಿಸಂದ್ರ, ಜಾಲಮಂಗಲ, ಕೂಟಗಲ್, ಲಕ್ಷಿಪುರ, ಸುಗ್ಗನಹಳ್ಳಿ, ಬಿಳಗುಂಬ, ಮಯಗಾನಹಳ್ಳಿ, ಶ್ಯಾನುಬೊಗನಹಳ್ಳಿ, ಬನ್ನಿಕುಪ್ಪೆ(ಕೆ), ಬನ್ನಿಕುಪ್ಪೆ(ಬಿ), ವಿಬೂತಿಕೆರೆ, ಮಂಚನಾಯಕನಹಳ್ಳಿ, ಹುಣಸನಹಳ್ಳಿ, ಕಂಚನಕುಪ್ಪೆ, ಗೋಪಹಳ್ಳಿ, ಕಂಚುಗಾರನಹಳ್ಳಿ, ಬೈರಮಂಗಲ ಸೇರಿದಂತೆ ಒಟ್ಟು 19 ಗ್ರಾಮ ಗುರುತಿಸಲಾಗಿದೆ.
1,199 ಗ್ರಾಪಂನಲ್ಲಿ ಜಾರಿ :
ಅಟಲ್ ಭೂಜಲ್ ಯೋಜನೆಯಡಿ ಗುಜರಾತ್, ಹರಿಯಾಣ, ಕರ್ನಾಟಕ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಅಂತರ್ಜಲ ಅತಿಶೋಷಿತ ಪ್ರದೇಶಗಳಲ್ಲಿನ ತಾಲೂಕುಗಳ ಮೇಲೆ ಗಮನ ಹರಿಸಲಾಗಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 41 ತಾಲೂಕುಗಳ 1,199 ಗ್ರಾಪಂನ 39,703 ಚದರ ಕಿಮೀ ವಿಸ್ತಾರ ಪ್ರದೇಶಗಳನ್ನು ಯೋಜನೆಗೆ ಗುರುತಿಸಲಾಗಿದೆ. ಇದು ಕೇಂದ್ರ ವಲಯ ಯೋಜನೆಯಾಗಿದ್ದು, ರಾಜ್ಯಗಳಿಗೆ ಅನುದಾನ ಸಹಾಯವಾಗಿ ಸಿಗಲಿದೆ. ರಾಜ್ಯಕ್ಕೆ ಹೂಡಿಕೆ ಮತ್ತು ಪ್ರೋತ್ಸಾಹ ಎರಡೂ ಘಟಕಗಳಿಂದ 1,201.52 ಕೋಟಿ ರೂ. ಅನುದಾನ ರೀತಿಯಲ್ಲಿ ಹಂಚಿಕೆಯಾಗಲಿದೆ ಎಂದು ನೋಡಲ್ ಅಧಿಕಾರಿ ಸಿ.ಪಿ.ರವಿ ತಿಳಿಸಿದರು.