Advertisement

ಅಟಲ್‌ ‘ಅಸ್ಥಿ ಕಲಶ ಯಾತ್ರೆ’ಆರಂಭ; ಮೊದಲು ಚಿತಾಭಸ್ಮ ಗಂಗೆಯಲ್ಲಿ ಲೀನ

04:23 PM Aug 19, 2018 | |

ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಚಿತಾಭಸ್ಮ ಮತ್ತು ಅಸ್ತಿಗಳನ್ನು ಭಾನುವಾರ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ವಿಸರ್ಜಿಸಲಾಯಿತು. 

Advertisement

ದತ್ತು ಪುತ್ರಿ ನಮಿತಾ ಕೌಲ್‌ ಭಟ್ಟಾಚಾರ್ಯ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ  ಹರಿದ್ವಾರದ ಹರ್‌ ಕಿ ಪೌರಿ ಪುಣ್ಯ ಸ್ಥಳದಲ್ಲಿ ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜಿಸಿದರು. 

ಈ ವೇಳೆ ನಮಿತಾ ಪುತ್ರಿ ನಿಹಾರಿಕಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌, ಉ.ಪ್ರ ಸಿಎಂ ಯೋಗಿ ಆದಿತ್ಯನಾಥ ,ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಸೇರಿದಂತೆ ಬಿಜೆಪಿ ನಾಯಕರು, ವಾಜಪೇಯಿ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. 

 ‘ಅಸ್ಥಿ ಕಲಶ ಯಾತ್ರೆ’ ಹೆಸರಿನಲ್ಲಿ ವಾಜಪೇಯಿ ಅವರ ಚಿತಾಭಸ್ಮದ ಕಲಶ ಯಾತ್ರೆ ದೇಶಾದ್ಯಂತ ನಡೆಸಿ ವಿವಿಧ ಪುಣ್ಯ ಸ್ಥಳಗಳಲ್ಲೂ ವಿಸರ್ಜಿಸಲಾಗುತ್ತದೆ. ಮಂಗಳವಾರ ವಾಜಪೇಯಿ ಅವರು ಪ್ರತಿನಿಧಿಸುತ್ತಿದ್ದ ಲಕ್ನೋ ಗೆ ಕಲಶವನ್ನು ಒಯ್ಯಲಾಗುತ್ತಿದೆ. ಅಲ್ಲಿ ಬೃಹತ್‌ ಶೃದ್ಧಾಂಜಲಿ ಸಭೆ ನಡೆಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next