Advertisement
ಶಿಕ್ಷಣದ ಅನಂತರ ವೃತ್ತಿ ಕ್ಷೇತ್ರವನ್ನು ಆಯ್ದುಕೊಳ್ಳದೆ, ತನ್ನ ಜೀವನವೇನಿದ್ದರೂ ರಾಷ್ಟ್ರ ಕಾರ್ಯಕ್ಕಾಗಿ ಎಂದು ದೃಢ ಸಂಕಲ್ಪ ತಳೆದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರ ಟರು. 1951 ಅಕ್ಟೋಬರ್ 21ರಂದು ಡಾ| ಶ್ಯಾಮ ಪ್ರಸಾದ್ ಮುಖರ್ಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ಜನಸಂಘದ ಸ್ಥಾಪನೆಯಾದಾಗ, ಆರೆಸ್ಸೆಸ್‌ನ ಆಗಿನ ಸರಸಂಘ ಚಾಲಕರಾದ ಶ್ರೀಗುರೂಜಿ ಗೋಳವಲ್ಕರ್ ಅವರು ದೀನ ದಯಾಳ್ ಉಪಾಧ್ಯಾಯ, ಅಟಲ…ರಂತಹ ನಿಸ್ವಾರ್ಥಿ ಹಾಗೂ ದೃಢ ನಿಶ್ಚಯ ಹೊಂದಿರುವ ಸಂಘದ ಕೆಲವು ಕಾರ್ಯಕರ್ತರು ಗಳನ್ನು ಭಾರತೀಯ ಜನಸಂಘಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಅಟಲ್ ಜಿಯವರ ರಾಜಕೀಯ ಯಾತ್ರೆ ಪ್ರಾರಂಭವಾಯಿತು.
1977ರ ಚುನಾವಣೆ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವಪೂರ್ಣ ಹಾಗೂ ಐತಿಹಾಸಿಕ ಚುನಾವಣೆ. ಭಾರತೀಯ ಜನಸಂಘ ಜನತಾ ಪಕ್ಷದೊಂದಿಗೆ ವಿಲೀನವಾಗಿ ಚುನಾವಣೆ ಯನ್ನು ಎದುರಿಸಿತು. ಕಾಂಗ್ರೆಸ್ ಹಿಂದೆಂದೂ ಕಂಡು ಕೇಳರಿಯ ದಂತಹ ಸೋಲನ್ನು ಅನುಭವಿಸಿತು. ಸ್ವತಃ ಇಂದಿರಾ ಸೋತು ಹೋದರು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿತು. ಅಟಲ್ ಬಿಹಾರಿ ವಾಜಪೇಯಿ ಯವರು ಆ ನೂತನ ಸರಕಾರದಲ್ಲಿ ವಿದೇಶಾಂಗ ಸಚಿವ ರಾದರು. 1980 ಎಪ್ರಿಲ್ 5ರಂದು ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು. ಪ್ರಥಮ ಅಧ್ಯಕ್ಷರಾಗಿ ಅಟಲ್ ಜಿ ಸರ್ವಾನು ಮತದಿಂದ ಆಯ್ಕೆಯಾದರು. 1992ರಲ್ಲಿ ಪಿ.ವಿ.ನರಸಿಂಹರಾವ್ ಅವರ ಸರಕಾರ ವಾಜಪೇಯಿಯವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಆ ಸಮಾರಂಭದಲ್ಲಿ ತಮ್ಮ ಊಂಚಾಯೀ ಕವನದ ಪಂಕ್ತಿಯೊಂದನ್ನು ವಾಚಿಸುತ್ತಾರೆ.. “ಹೇ ಈಶ್ವರಾ.. ಪರರನ್ನು ಆಲಂಗಿಸಲಾರದಷ್ಟು ಎತ್ತರಕ್ಕೆ ನನ್ನ ಏರಿಸ ಬೇಡ’, ಎನ್ನುತ್ತಾ, ಎಲ್ಲರೂ ಏರಲು ಹಪಹಪಿಸುವ ಆ ಎತ್ತರವನ್ನು ಶವಪೆಟ್ಟಿಗೆ ಮತ್ತು ಸಾವಿಗೆ ಹೋಲಿಸಿದ್ದರು, ಆ ಕವಿ ಹೃದಯದ ವೇದಾಂತಿ.
1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾಜ ಪೇಯಿ ಅವರು ಗಾಂಧೀನಗರ ಹಾಗೂ ಲಕ್ನೋ ಕ್ಷೇತ್ರಗಳಿಂದ ಸ್ಪರ್ಧಿಸಿ, ಭರ್ಜರಿ ವಿಜಯ ಸಾಧಿಸಿದರು. ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ 161 ಸ್ಥಾನಗಳನ್ನು ಪಡೆದು ಸಂಸತ್ತಿನಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಭಾಜಪದ ಸಂಸದೀಯ ನಾಯಕನಾಗಿ ಆಯ್ಕೆಗೊಂಡ ಅಟಲ್ ಜಿ 1996 ಮೇ 16ರಂದು ಭಾರತದ ಪ್ರಧಾನಮಂತ್ರಿಯಾದರು. ಕೇಂದ್ರದಲ್ಲಿ ಮೊಟ್ಟಮೊದಲ ಸಂಪೂರ್ಣ ಕಾಂಗ್ರೆಸೇತರ ಸರಕಾರವೊಂದು ಅಸ್ತಿತ್ವಕ್ಕೆ ಬಂದಿತ್ತು.
Related Articles
Advertisement
ದೇಶದ ಪ್ರಧಾನಿಯಾದರೂ ಅಟಲ್ ಜೀಗೆ ಸ್ವಂತ ಮನೆ ಎಂಬುದು ಇರಲಿಲ್ಲ. ಗ್ವಾಲಿಯರ್‌ನಲ್ಲಿದ್ದ ತನ್ನ ತಂದೆಯ ಮನೆ ಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ನೀಡಿ ಪಕ್ಷದ ಕಚೇರಿಯಲ್ಲಿ ಮಲಗುತ್ತಿದ್ದ ವಾಜಪೇಯಿ ಅಕ್ಷರಶಃ ಅನಿಕೇತನರು. ಅವರ ಪರಿವಾರದ ಯಾವೊಬ್ಬ ಸದಸ್ಯನೂ ಪಕ್ಷದ ಜವಾಬ್ದಾರಿ ಅಥವಾ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ತಾವು ಶಾಸಕ, ಸಂಸದ, ಸಚಿವರಾಗುವುದೇ ತನ್ನ ಕುಟುಂಬ, ಜಾತಿಯ ಏಳ್ಗೆಗಾಗಿ ಎನ್ನುವ ಸ್ವಾರ್ಥಿ ರಾಜಕಾರಣಿಗಳಿಗೆ ಅಟಲ್ ಜಿ ರಾಜಕೀಯ ಜೀವನ ದಾರಿದೀಪ.
ಪ್ರಕಾಶ್ ಮಲ್ಪೆ