Advertisement
ಒಂದು ತಿಂಗಳು ನಿರ್ಮಾಣ ಕಾರ್ಯಸರಿ ಸುಮಾರು ಒಂದು ತಿಂಗಳು ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ದೇಶ ವಿದೇಶದಿಂದ ಮಸ್ತಾಭಿಷೇಕ ಕಣ್ತುಂಬಿಕೊಳ್ಳಲು ಬಂದ ಭಕ್ತರು ಅಟ್ಟಳಿಗೆ ವಿನ್ಯಾಸವನ್ನು ಕಂಡು ಕೊಂಡಾಡಿದ್ದರು. ಇದೀಗ ಹಂತಹಂತದಲ್ಲಿ ತೆರವಿನ ಕಾರ್ಯ ಕೈಗೊಳ್ಳ ಲಾಗಿದ್ದು, ಸಂಪೂರ್ಣ ತೆರವಿಗೆ ಸುಮಾರು ಒಂದು ತಿಂಗಳು ಹೆಚ್ಚೇ ತಗುಲಲಿದೆ.
ಮಂಗಳಮೂರ್ತಿಯ ಅಕ್ಕಪಕ್ಕ ಮೂರು ಹಂತದಲ್ಲಿ ನಿರ್ಮಿಸಲಾಗಿದ್ದ ಭವ್ಯ ಅಟ್ಟಳಿಗೆ ಮತ್ತೂಮ್ಮೆ ಕಣ್ತುಂಬಿಕೊಳ್ಳಲು 12 ವರ್ಷ ಸವೆಯಬೇಕಿದೆ. ಮಹಾಮಸ್ತಕಾಭಿಷೇಕ ಫೆ.18ರಂದು ಕೊನೆಗೊಂಡ ಬಳಿಕ ವಿವಿಧ ಸಂಘಸಂಸ್ಥೆಗಳಿಗೆ ಡಾ| ಹೆಗ್ಗಡೆ ಪರಿವಾರದಿಂದ ಮಾ.24ರವರೆಗೆ ಪ್ರತಿ ಭಾನುವಾರ ಅಭಿಷೆೇಕಕ್ಕೆ ಅವಕಾಶ ನೀಡಿತ್ತು.
Related Articles
6 ಅಂತಸ್ತಿನ ಅಟ್ಟಳಿಗೆಯನ್ನು ಸುಮಾರು 80 ಟನ್ ಸ್ಟೀಲ್ ಬಳಸಿ ನಿರ್ಮಿಸಲಾಗಿತ್ತು. ಅಟ್ಟಳಿಗೆ 13.7 ಮೀ. ಅಗಲ, 62 ಅಡಿ ಎತ್ತರ ಇದ್ದು, ಪ್ಲೈವುಡ್ ಹಾಕಿ ನಿಲ್ಲಲು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 400ರಿಂದ 500 ಮಂದಿ ಅಟ್ಟಳಿಗೆ ಮೇಲೆ ನಿಂತು ಏಕಕಾಲದಲ್ಲಿ ಅಭಿಷೇಕ ಮಾಡಿದ್ದರು. ಹಿಂಭಾಗದಿಂದ ಮೆಟ್ಟಿಲುಗಳ ವ್ಯವಸ್ಥೆ, ಅಭಿಷೇಕ ಮಾಡುವವರು ನಿಲ್ಲಲು ಹಾಗೂ ಅಭಿಷೇಕಕ್ಕೆ ಬೇಕಾದ ದ್ರವ್ಯ ಗಳನ್ನು ಸಂಗ್ರಹಿಸಿಡಲು ಸ್ಥಳಾವಕಾಶವೂ ಮಾಡಲಾಗಿತ್ತು. ಸದ್ಯ 6 ಅಂತಸ್ತಿನ ಅಟ್ಟಳಿಗೆಯ ಶೇ.50 ಭಾಗ ತೆರವುಗೊಳಿಸಲಾಗಿದ್ದು, ಇನ್ನು ತೆರವು ಕಾರ್ಯ ಹಂತ ಹಂತದಲ್ಲಿ ಸಾಗುತ್ತಿದೆ.
Advertisement
ಈಗಲೂ ಜನಸಂದಣಿವಿರಾಟ್ಮೂರ್ತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಈಗಲೂ ರತ್ನಗಿರಿಯಲ್ಲಿ ಜನಸಂದಣಿ ಇದೆ. ರಾಜ್ಯ ಹೊರ ರಾಜ್ಯಗಳಿಂದ ಮಹಾಮಸ್ತಕಾಭಿಷೇಕ ಸಂದರ್ಭ ವಿರಾಗಿ ಮಜ್ಜನ ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರುವವರು ಪ್ರಸ್ತುತ ರತ್ನಗಿರಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿವರೆಗೆ ಈ ಬಾರಿಯ ವಿರಾಗಿ ಮಜ್ಜನ ಜನಜನಿತವಾಗಿತ್ತು. ಚೈತ್ರೇಶ್ ಇಳಂತಿಲ