Advertisement

ಮುಡಬಿ ಬಸ್‌ ನಿಲ್ದಾಣದಲ್ಲಿ ಶೌಚಾಲಯವಿಲ್ಲದೇ ಪರದಾಟ

12:38 PM Dec 01, 2019 | Team Udayavani |

ಬಸವಕಲ್ಯಾಣ: ತಾಲೂಕಿನ ಹೋಬಳಿ ಮಟ್ಟದ ಮುಡಬಿ ಗ್ರಾಮದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇಲ್ಲದ ಕಾರಣ ಸಂಸ್ಥೆಯ ಸಿಬ್ಬಂದಿಹಾಗೂ ಪ್ರಯಾಣಿಕರು ಶೌಚಕ್ಕೆ ನಿತ್ಯ ಪರದಾಡುವಂತ ಸ್ಥಿತಿ ಎದುರಾಗಿದೆ.

Advertisement

ಹೋಬಳಿ ಮಟ್ಟದ ಗ್ರಾಮಗಳಲ್ಲಿಒಂದಾದ ಮುಡಬಿ ಗ್ರಾಮವು ಕಲಬುರಗಿ- ಬಸವಕಲ್ಯಾಣ ಸಂಪರ್ಕಕಲ್ಪಿಸುವ ರಸ್ತೆಯಮಧ್ಯದಲ್ಲಿರುವಗ್ರಾಮವಾಗಿದೆ. ಹೀಗಾಗಿ ನಿತ್ಯ ವಿದ್ಯಾರ್ಥಿಗಳು, ವೈದ್ಧರು, ಗರ್ಭಿಣಿಯರು ಮತ್ತು ಸಾವಿರಾರು ಪ್ರಯಾಣಿಕರು ಬಸ್‌ನಿಲ್ದಾಣದಲ್ಲಿಕುಳಿತುಕೊಂಡು ಪ್ರಯಾಣಿಸುವ ಕೇಂದ್ರಸ್ಥಾನ ಇದಾಗಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್‌ ವತಿಯಿಂದಬಸ್‌ನಿಲ್ದಾಣದಲ್ಲಿ ಅಥವಾ ಪಕ್ಕದಲ್ಲಿ ಪ್ರಯಾಣಿಕರು ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಿಲ್ಲ.

ಇದರಿಂದ ಸ್ಥಳೀಯ ವ್ಯಾಪಾರಸ್ಥರು, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಆಕ್ರೋಷಕ್ಕೆ ಕಾರಣವಾಗಿದೆ. ಹಗಲು-ರಾತ್ರಿ ಎನ್ನದೆ ಸಾರ್ವಜನಿಕರು ಮತ್ತು ಪ್ರಯಾಣಿಕರುಬಹಿರ್ದೆಶೆಗೆ ಬಯಲನ್ನೇಅವಲಂಬಿಸಬೇಕಾಗಿದೆ. ಆದರೂಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ಮುಂದಾಗುತ್ತಿಲ್ಲ ಎಂದು ನಿಲ್ದಾಣದ ಪಕ್ಕದಲ್ಲಿ ವ್ಯಾಪಾರಮಾಡುವ ಬಸವರಾಜ ಎಂ.ಕುಂಬಾರ ಆರೋಪಿಸಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಾಣ ಮಾಡಿದರೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಬಹಿರ್ದೆಶೆಗೆ ಬಯಲಿಗೆ ಹೋಗುವುದು ತಪ್ಪುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next