ಹುಲಿಯೆಂದರೆ ಹೆದರಿಕೆ ಸಾಮಾನ್ಯ. ಹುಲಿಗಳ ವಿಡಿಯೋಗಳೂ ಭಯಾನಕವೆನಿಸುತ್ತದೆ. ಆದರೆ ಈ ಹುಲಿಯ ವಿಡಿಯೋ ನೋಡುತ್ತಿರುವ ಜನರು “ಇದುವೇ ಸ್ವಾತಂತ್ರ್ಯ’ ಎಂದು ಹೇಳುತ್ತಿದ್ದಾರೆ.
ಕಾಡು ಬಿಟ್ಟು ನಾಡಿಗೆ ಹೊಕ್ಕಿದ್ದ ಹುಲಿಯನ್ನು ರಕ್ಷಿಸಿ, ಅದನ್ನು ಸುಂದರ್‌ಬನ್ಸ್ ಅರಣ್ಯದಲ್ಲಿ ಬಿಡಲೆಂದು ಸಣ್ಣ ಹಡಗಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಇನ್ನೇನು ಸುಂದರ್‌ಬನ್ಸ್ ದಡ ಸ್ವಲ್ಪವೇ ದೂರದಲ್ಲಿದೆ ಎನ್ನುವಾಗ ಹುಲಿ ಹಡಗಿನಿಂದ ನೀರಿಗೆ ಹಾರಿದೆ. ಅರಾಮವಾಗಿ ಈಜಿಕೊಂಡು ದಡಕ್ಕೆ ತಲುಪಿ, ಅಲ್ಲಿಂದ ಓಡಿ ಕಾಡೊಳಗೆ ಮರೆಯಾಗಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಲ್ವಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದು ಹಳೆಯ ವಿಡಿಯೋ ಆಗಿದ್ದರೂ, ನೆಟ್ಟಿಗರು ಮೆಚ್ಚಿ ಹೆಚ್ಚು ಶೇರ್ ಮಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.