Advertisement

ಕಿ.ಮೀ.ಗೆ 4 ರೂ, ಆಟೋಕ್ಕಿಂತ ವಿಮಾನ ಪ್ರಯಾಣ ದರವೇ ಅಗ್ಗ: ಸಚಿವ ಸಿನ್ಹಾ

11:04 AM Sep 04, 2018 | udayavani editorial |

ಹೊಸದಿಲ್ಲಿ : ಕಿಲೋ ಮೀಟರ್‌ಗೆ  ನಾಲ್ಕು ರೂಪಾಯಿ ಆಗುವ ವಿಮಾನ ಪ್ರಯಾಣ ದರವು ಆಟೋ ಪ್ರಯಾಣ ದರಕ್ಕಿಂತ ಅಗ್ಗ ಎಂದು ಕೇಂದ್ರ ಸಚಿವ ಜಯಂತ್‌ ಸಿನ್ಹಾ ಹೇಳಿದ್ದಾರೆ. 

Advertisement

“ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು. ಇಬ್ಬರು ಪ್ರಯಾಣಿಕರು ಜತೆಗೂಡಿ ಆಟೋ ಹತ್ತುತ್ತಾರೆ ಎಂದಿಟ್ಟುಕೊಳ್ಳೋಣ. ಆಟೋದಲ್ಲಿ ಕಿ.ಮೀಗೆ ಹತ್ತು ರೂಪಾಯಿ ಆಗುವ ದರವನ್ನು ಅವರು ಹಂಚಿಕೊಂಡಾಗ ಅದು ತಲಾ 5 ರೂ. ಆಗುತ್ತದೆ. ಆದರೆ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ತಲಾ ಕಿ.ಮೀ. ಪ್ರಯಾಣ ದರ ಕೇವಲ 4 ರೂ. ಆಗುತ್ತದೆ’ ಎಂದು ಕೇಂದ್ರ ನಾಗರಿಕ ವಾಯುಯಾನ ಸಹಾಯಕ ಸಚಿವ ಜಯಂತ್‌ ಸಿನ್ಹಾ ಹೇಳಿದರು. 

ವಿಶೇಷವೆಂದರೆ ಸಚಿವ ಜಯಂತ್‌ ಸಿನ್ಹಾ ಅವರ ಈ ಹೇಳಿಕೆಯು ಇಂಡಿಯನ್‌ ಏರ್‌ಲೈನ್ಸ್‌ ಭಾರೀ ನಷ್ಟಕ್ಕೆ ಗುರಿಯಾಗಿರುವ ಸಂದರ್ಭದಲ್ಲೇ ಬಂದಿದೆ !

ಸಿಎಪಿಎ ಇಂಡಿಯಾ ಅಧ್ಯಯನದ ಪ್ರಕಾರ ಇಂಡಿಯನ್‌ ಏರ್‌ಲೈನ್ಸ್‌  ಸಂಯುಕ್ತ ನಷ್ಟ ಈ ಹಣಕಾಸು ವರ್ಷದಲ್ಲಿ 1.9 ಶತಕೋಟಿ ಡಾಲರ್‌ ಆಗಲಿದೆ. ಏರಿಂಡಿಯಾ ಮತ್ತು ಜೆಟ್‌ ಏರ್‌ ವೇಸ್‌ ನಷ್ಟದಲ್ಲಿ ಮುಂದಿವೆ; ಏರುತ್ತಿರುವ ವೆಚ್ಚಗಳು ಮತ್ತು ಕಡಿಮೆ ಪ್ರಯಾಣ ದರವೇ ಇದಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next