Advertisement

ಸದ್ಯಕ್ಕೆ ಏಕಕಾಲದ ಚುನಾವಣೆ ಅಸಾಧ್ಯ

10:58 AM Aug 15, 2018 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸದ್ಯದ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಕಾನೂನು ಬದಲಾವಣೆ ಮಾಡದೆ ಅದನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಮಂಗಳವಾರ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಒಂದು ವರ್ಷದ ಒಳಗಾಗಿ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ಇದೆ ಎಂದು ಕಾನೂನು ಆಯೋಗಕ್ಕೆ ಪತ್ರ ಬರೆದ ಮಾರನೇ ದಿನವೇ ಆಯೋಗದಿಂದ ಸ್ಪಷ್ಟ ಅಭಿಪ್ರಾಯ ಹೊರಬಿದ್ದಿದೆ.

Advertisement

ಶೀಘ್ರವೇ  ಏಕಕಾಲದಲ್ಲಿ ಚುನಾವಣೆ ನಡೆಸ ಬೇಕು ಎಂಬ ಸಲಹೆಯನ್ನು ಮುಖ್ಯ ಚುನಾವಣಾ ಆಯುಕ್ತ ತಳ್ಳಿ ಹಾಕಿದ್ದಾರೆ. ಕೆಲವು ರಾಜ್ಯಗಳ ವಿಧಾನ ಸಭೆ ಅವಧಿಯನ್ನು ಮುಂದೂಡಬೇಕು ಅಥವಾ ಹಿಂದೂಡ ಬೇಕು ಎಂದಾದರೆ ಅದಕ್ಕೆ ಸಾಂವಿಧಾನಿಕ ತಿದ್ದುಪಡಿ ಮಾಡ ಬೇಕು. ಶೇ.100ರಷ್ಟು ಮತ ದೃಢೀಕರಣ ಪತ್ರ ವ್ಯವಸ್ಥೆ (ವಿವಿಪ್ಯಾಟ್‌)ಬೇಕು. ಸದ್ಯ ಅದರ ಕೊರತೆ ಇದೆ ಎಂದು ರಾವತ್‌ ಹೇಳಿದ್ದಾರೆ. ಆಯಾ ವಿಧಾನಸಭೆಗಳನ್ನು ವಿಸರ್ಜಿ ಸುವ ಬಗ್ಗೆ ಆಯಾ ರಾಜ್ಯ ಸರಕಾರಗಳೇ ನಿರ್ಧಾರ ಕೈಗೊಳ್ಳ ಬೇಕು ಮತ್ತು ಅವುಗಳಿಗೆ ಅಧಿಕಾರ ಇದೆ ಎಂದಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರು 10-11 ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿದೆ ಎಂದಿದ್ದರು.

ಕಾಂಗ್ರೆಸ್‌ ಸವಾಲು: ವರ್ಷಾಂತ್ಯದಲ್ಲಿ ನಡೆಯಲಿರುವ 4 ರಾಜ್ಯಗಳ ಅಸೆಂಬ್ಲಿ ಚುನಾವಣೆ ಜತೆಗೆ ಲೋಕಸಭೆಗೆ ಕೂಡ ಚುನಾವಣೆ ನಡೆಸಿ . ಅದಕ್ಕಾಗಿ ಲೋಕಸಭೆ ವಿಸರ್ಜಿಸುವ ನಿರ್ಧಾರ ಮಾಡಿ ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹೊಟ್‌ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಏಕಕಾಲದ ಚುನಾವಣೆಯ ಪರ ವಾಗಿದೆ. ಆದರೆ, ಅಮಿತ್‌ ಶಾ ಅವರು ಕಾನೂನು ಆಯೋಗಕ್ಕೆ ಬರೆದ ಪತ್ರದಲ್ಲಿ 11 ರಾಜ್ಯಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸ ಬೇಕೆಂಬ ಪ್ರಸ್ತಾವವೇ ಇಲ್ಲ. ಇದೆಲ್ಲ ಕೇವಲ ಬ್ರಾಂತಿ.
ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next