Advertisement

ಕೊನೇ ಹಂತ ಶೇ.61 ಮತದಾನ

02:19 AM May 20, 2019 | Sriram |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಕ್ಷೇತ್ರ ಸೇರಿದಂತೆ 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಭಾನುವಾರ ಮತದಾನ ಪೂರ್ಣಗೊಂಡಿದ್ದು, 38 ದಿನಗಳ ಕಾಲ ನಡೆದ ಲೋಕಸಭಾ ಮತ ಸಮರಕ್ಕೆ ಪೂರ್ಣವಿರಾಮ ಬಿದ್ದಿದೆ. 7ನೇ ಹಾಗೂ ಕೊನೇ ಹಂತದಲ್ಲಿ ಶೇ.61 ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Advertisement

ದೇಶಾದ್ಯಂತದ 542 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆದಿದ್ದು, ಸುಮಾರು 8 ಸಾವಿರ ಅಭ್ಯರ್ಥಿಗಳ ಭವಿಷ್ಯವು ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿವೆ. ಮೇ 23ರಂದು ಇವರೆಲ್ಲರ ಭವಿಷ್ಯವೂ ಬಹಿರಂಗವಾಗಲಿದೆ.

ಪ್ರತಿಯೊಂದು ಹಂತದಲ್ಲೂ ಹಿಂಸಾಚಾರವನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ಭಾನುವಾರವೂ ಭಾರಿ ಹಿಂಸಾಚಾರ ನಡೆದಿದೆ. ಟಿಎಂಸಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಕಾರುಗಳ ಮೇಲೆ ಬಾಂಬ್‌ ದಾಳಿ, ಕಲ್ಲು-ಇಟ್ಟಿಗೆ ತೂರಾಟದಂಥ ಘಟನೆಗಳು ನಡೆದಿವೆ. ಇನ್ನು ಪಂಜಾಬ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗುಂಡು ಹಾರಿಸಿರುವ ಸಂಗತಿಯೂ ಬೆಳಕಿಗೆ ಬಂದಿದೆ.

ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ ಒಟ್ಟಾರೆ 3,449.12 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ಹೇಳಿದೆ. 2014ಕ್ಕೆ ಹೋಲಿ ಸಿದರೆ ಈ ಪ್ರಮಾಣ 3 ಪಟ್ಟು ಅಧಿಕ. ಹಿಂದಿನ ಚುನಾವಣೆಯಲ್ಲಿ 1,206 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next