Advertisement

ಸ್ಕೂಲ್‌ ಶೂಟೌಟ್‌ಗೆ 17 ಬಲಿ

08:15 AM Feb 16, 2018 | Team Udayavani |

ವಾಷಿಂಗ್ಟನ್‌: ಅಮೆರಿಕದ ಫ್ಲೋರಿಡಾದಲ್ಲಿರುವ ಪಾರ್ಕ್‌ಲ್ಯಾಂಡ್‌ನ‌ ಮಾಜೊìರಿ ಸ್ಟೋನ್‌ಮನ್‌ ಡಗ್ಲಾಸ್‌ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿರುವ ಶೂಟೌಟ್‌ಗೆ 17 ವಿದ್ಯಾರ್ಥಿಗಳು ಬಲಿಯಾಗಿದ್ದು 16 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

Advertisement

ಅಮೆರಿಕದಲ್ಲಿ ಆಗಾಗ ನಡೆಯುವ ಶೂಟೌಟ್‌ ಪ್ರಕರಣಗಳಲ್ಲೇ ಇದು ಅತ್ಯಂತ ಘೋರ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಶೂಟೌಟ್‌ ನಡೆಸಿದ ನಿಕೋಲಸ್‌ ಕ್ರುಜ್‌ (19) ಎಂಬಾತನ್ನು ಶಾಲಾ ಕ್ಯಾಂಪಸ್‌ನ ಹೊರಭಾಗದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಶಾಲೆಯಲ್ಲಿ ಭಾರತೀಯ ಮೂಲದ ಮಕ್ಕಳೂ ಓದುತ್ತಿದ್ದು, ಶೂಟೌಟ್‌ನಲ್ಲಿ ಒಬ್ಬ ಭಾರತೀಯ ಮೂಲದ ವಿದ್ಯಾರ್ಥಿ ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ. 

ಇದೇ ಶಾಲೆಯಲ್ಲೇ ಓದುತ್ತಿದ್ದ ಕ್ರುಜ್‌ನನ್ನು ಅಶಿಸ್ತಿನ ಕಾರಣದಿಂದಾಗಿ ಕೆಲ ದಿನಗಳ ಹಿಂದೆ ಶಾಲೆಯಿಂದ ಹೊರಹಾಕಲಾಗಿತ್ತು. ಇದರಿಂದ ಆತ ಸಿಟ್ಟಿಗೆದ್ದಿದ್ದು, ಶೂಟೌಟ್‌ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. 

ಶಾಲೆಯಲ್ಲಿ ಅಗ್ನಿ ಅವಗಢವಾದಾಗ ವಿದ್ಯಾರ್ಥಿಗಳನ್ನು ಎಚ್ಚರಿಸಲು ಫೈರ್‌ ಬೆಲ್‌ ಅಳವಡಿಸಲಾಗಿತ್ತು. ಶಾಲೆಯಿಂದ ಹೊರಹಾಕಲಾಗಿದ್ದರೂ, ತನ್ನ ಸ್ನೇಹಿತ ಕುಟುಂಬವೊಂದರ ಕಾರಿನಲ್ಲಿ ಶಾಲೆಯ ಆವರಣದೊಳಕ್ಕೆ ಪ್ರವೇಶಿಸಿದ್ದ ಕ್ರುಜ್‌, ಫೈರ್‌ ಬೆಲ್‌ ಒತ್ತಿದ್ದಾನೆ. ಇದರಿಂದ ಭೀತಿಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ತರಗತಿಗಳಿಂದ ಹೊರಗೆ ಓಡಿ ಬಂದ ಕೂಡಲೇ ಅವರ ಮೇಲೆ ತಾನು ತಂದಿದ್ದ ಎಆರ್‌-15 ಎಂಬ ರೈಫ‌ಲ್‌ನಿಂದ ಶೂಟೌಟ್‌ ನಡೆಸಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next