Advertisement
ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಚಿಕ್ಕೇನಹಳ್ಳಿ ಕೆರೆಯ ನೀರಿನಲ್ಲಿ ಭಾನುವಾರ ಇಬ್ಬರು ಮಕ್ಕಳು ಸೇರಿ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಕುಮಾರಸ್ವಾಮಿ ಲೇಔಟ್ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಶೇಖರ್ (30) ಈತನ ಪತ್ನಿ ಚನ್ನಪಟ್ಟಣ ಮೂಲದ ಸುಮಾ (26), ಇವರ ಅಕ್ಕನ ಮಕ್ಕಳಾದ ಹಂಸ (10), ಧನುಷ್ (7) ಮೃತಪಟ್ಟವರು.
Related Articles
Advertisement
ಮಣ್ಣೂರ ಗ್ರಾಮದ ಸಾಹೀಲ್ ಮನೋಹರ ಬಾಳೇಕುಂದ್ರಿ (14), ಆಕಾಶ ಕಲ್ಲಪ್ಪ ಚೌಗುಲಾ(14) ಹಾಗೂ ಕುಷನ್ ಕಲ್ಲಪ್ಪ ಚೌಗುಲೆ(11) ನೀರು ಪಾಲಾದವರು.
ಎಮ್ಮೆಗಳನ್ನು ಮೇಯಿಸಲು ಊರ ಹೊರಗಿನ ಹೊಲದ ಕಡೆಗೆ ಹೋಗಿದ್ದರು. ಅಲ್ಲಿ ಕ್ವಾರಿ ಕೊರೆದಿರುವ ಹೊಂಡದಲ್ಲಿ ಈಜಲುಕೆಳಗಿಳಿದರು. ಈಜು ಬಾರದ್ದಕ್ಕೆ ಪ್ಲಾಸ್ಟಿಕ್ ಡಬ್ಬಿ ಕಟ್ಟಿಕೊಂಡು ನೀರಿಗೆ ಧುಮುಕಿದ್ದರು. ಈ ವೇಳೆ,ಮೂವರು ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ಶನಿವಾರ ಸಂಜೆ ಗೆಳೆಯರೊಂದಿಗೆ ಹಡಗಲಿ ರಸ್ತೆಯಲ್ಲಿರುವ ಸಿದ್ದಾಪುರ ಕೆರೆಗೆ ಈಜಲು ಹೋದ ಸೈಯ್ಯದ್ ಅಫಾನ್(11) ಸಾವನ್ನಪ್ಪಿದ್ದಾನೆ. ತಂದೆ, ಇಬ್ಬರು ಮಕ್ಕಳು ಸಾವು: ಅಂಕೋಲಾ ತಾಲೂಕಿನ ಹಟ್ಟಿಕೇರಿಯ ತಾರಿಬೊಳೆ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತಾರಿಬೊಳೆ ನಿವಾಸಿಗಳಾದ ರಮೇಶ ಅಂಬಿಗ(50), ಮಕ್ಕಳಾದ ಪಿಯುಸಿ ವಿದ್ಯಾರ್ಥಿ ರವಿ ರಮೇಶ ಅಂಬಿಗ (17) ಹಾಗೂ 7ನೇ ತರಗತಿ ವಿದ್ಯಾರ್ಥಿ ನವೀನ ರಮೇಶ ಅಂಬಿಗ (13)ಮೃತರು. ಭಾನುವಾರ ಬೆಳಗ್ಗೆ ಇವರು ಹಟ್ಟಿಕೇರಿ ನದಿಗೆ ಮೀನುಗಾರಿಕೆಗೆ ತೆರಳಿದ್ದರು. ಮೃತ ತಾಯಿಗೆ ಪಿಂಡ ಪ್ರದಾನ ಮಾಡಲು ಆಗಮಿಸಿದ್ದ ಹಗರಿಬೊಮ್ಮನಹಳ್ಳಿ ನಿವಾಸಿ ಅನಿಲ್‌ಕುಮಾರ್ (42) ಹಂಪಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಭಾನುವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ನಾಲ್ವರ ಸಾವು
ಸಾರಿಗೆ ಬಸ್ ಹಾಗೂ ಟವೇರಾ ವಾಹನದ ಮಧ್ಯೆ ಮುಖಾಮುಖೀ ಡಿಕ್ಕಿ ಸಂಭವಿಸಿ ಟವೇರಾ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ
ಮೃತಪಟ್ಟ ಘಟನೆ ಧಾರವಾಡ-ಹಳಿಯಾಳ ಮಾರ್ಗದ ಮುರಕಟ್ಟಿ ಕ್ರಾಸ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಧಾರವಾಡ ನಗರದ ಕಂಠಿ ಓಣಿ ನಿವಾಸಿಗಳಾದ ಇಮ್ರಾನ್ ಜಲೀಲಸಾಬ ಮಕಾನದಾರ(38), ಪತ್ನಿ ಆಫ್ರಿನ್ ಇಮ್ರಾನ್ ಮಕಾನದಾರ (28), ಮಗಳು ಆಯಷಾ (2), ಚಾಲಕ ತಾಲೂಕಿನ ಲೋಕುರ ಗ್ರಾಮದ ಸಂತೋಷ ತಳವಾರ(22) ಮೃತಪಟ್ಟವರು.