ಕಾಬೂಲ್: ಅಫ್ಘಾನಿಸ್ತಾನದ ಅತೀ ದೊಡ್ಡ ಮಿಲಿಟರಿ ಆಸ್ಪತ್ರೆಯಲ್ಲಿ ಸಂಭವಿಸಿದ ಎರಡು ಸ್ಫೋಟ ಹಾಗೂ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಘಟನೆ ಕಾಬೂಲ್ ನಲ್ಲಿ ಮಂಗಳವಾರ(ನವೆಂಬರ್ 02) ಸಂಭವಿಸಿರುವುದಾಗಿ ರಾಯಿಟರ್ಸ್ ವರದಿ ತಿಳಿಸಿದೆ.
ಇದನ್ನೂ ಓದಿ:ಮಾನೆ ವೈಯಕ್ತಿಕ ವರ್ಚಸ್ಸಿನ ಗೆಲುವು, ಕಾಂಗ್ರೆಸ್ ಗೆಲುವಲ್ಲ: ಸೋಮಣ್ಣ
ಸೆಂಟ್ರಲ್ ಕಾಬೂಲ್ ನಲ್ಲಿರುವ 400 ಬೆಡ್ ಗಳ ಸರ್ದಾರ್ ಮೊಹಮ್ಮದ್ ದೌದ್ ಖಾನ್ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಭದ್ರತಾ ಪಡೆಯನ್ನು ರವಾನಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖ್ವಾರಿ ಸಯೀದ್ ಖೋಸ್ಟೈ ತಿಳಿಸಿದ್ದಾರೆ.
ಘಟನೆಯಲ್ಲಿ ಎಷ್ಟು ಮಂದಿ ನಿಖರವಾಗಿ ಸಾವನ್ನಪ್ಪಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ. ಆದರೆ ತಾಲಿಬಾನ್ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 34 ಮಂದಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಸ್ಫೋಟದ ಪರಿಣಾಮ ಇಡೀ ಪ್ರದೇಶದ ಸುತ್ತ ದಟ್ಟ ಹೊಗೆಯಿಂದ ಆವೃತವಾಗಿದ್ದು, ಎರಡು ಹೆಲಿಕಾಪ್ಟರ್ ಗಳು ಹಾರಾಟ ನಡೆಸುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.