Advertisement

ಇಂಧೋರ್‌ನಲ್ಲಿ ಕಟ್ಟಡ ಕುಸಿದು 10 ಮಂದಿ ದಾರುಣ ಸಾವು 

10:59 AM Apr 01, 2018 | Team Udayavani |

ಇಂಧೋರ್‌: 3 ಮಹಡಿಗಳ ಕಟ್ಟಡವೊಂದು ಕುಸಿದು 10 ಮಂದಿ ಸಾವನ್ನಪ್ಪಿ  ಹಲವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಶನಿವಾರ ತಡರಾತ್ರಿ ಮಧ್ಯಪ್ರದೇಶದಲ್ಲಿ ನಡೆದಿದೆ. 

Advertisement

ಕುಸಿತಕ್ಕೊಳಗಾದ ಕಟ್ಟಡದಲ್ಲಿ ವಸತಿ ಮತ್ತು ಹೊಟೇಲ್‌ ಇತ್ತು. ಕುಸಿಯಲು ಕಾರಣವೇನು ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ.

ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಘೋಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next