Advertisement

ಧರ್ಮಸಂಸದ್‌ ಅಧಿವೇಶನದಲ್ಲಿ 2,000 ಸಾಧು, ಸಂತರು ಭಾಗಿ

11:41 AM Oct 16, 2017 | |

ಉಡುಪಿ: ಯೋಗಗುರು ಬಾಬಾ ರಾಮದೇವ್‌, ಗೋರಖಪುರದ ಪೀಠಾಧೀಶ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ, ರವಿಶಂಕರ ಗುರೂಜಿ, ಶ್ರೀ ಆದಿಚುಂಚನಗಿರಿ ಮಠಾ ಧೀಶರು, ಸುತ್ತೂರು ಮಠಾಧೀಶರು, ಮಂತ್ರಾಲಯ ಮಠಾಧೀಶರು… ಹೀಗೆ ಅನೇಕಾನೇಕ ಸಾಧು, ಸಂತರು ಉಡುಪಿಯಲ್ಲಿ ನ. 24ರಿಂದ 26ರ ವರೆಗೆ ನಡೆಯುವ ಧರ್ಮ ಸಂಸದ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವರು.

Advertisement

ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷದ್‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ ಮೇಲಿನ ವಿಷಯಗಳನ್ನು ವಿವರಿಸಿದರು. ಇವರೆಲ್ಲರನ್ನೂ ಉಡುಪಿ ನಗರದಲ್ಲಿ ಉಳಿಸಿಕೊಳ್ಳಲು ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ 500 ಮನೆಗಳವರು, ಅಪಾರ್ಟ್‌ಮೆಂಟ್‌ನವರು ಸಾಧುಸಂತರನ್ನು ಉಳಿಸಿಕೊಳ್ಳಲು ಮುಂದೆ ಬಂದಿದ್ದಾರೆ. ವಿವಿಧ ಸಂಪ್ರದಾಯಗಳ ಸುಮಾರು 2,000 ಸಾಧು ಸಂತರು ಪಾಲ್ಗೊಳ್ಳುವ ಸಮಾವೇಶವನ್ನು ನಿಭಾಯಿಸಲು ಸುಮಾರು 1,000 ಪ್ರಬಂಧಕರು
ರಾಜ್ಯದ ವಿವಿಧೆಡೆಗಳಿಂದ ಆಗಮಿಸಲಿದ್ದಾರೆ ಎಂದರು.

ಕುಂಕುಮಧಾರಿ ಶಂಕಿತರು!
ಗೌರಿ ಲಂಕೇಶ್‌ ಹತ್ಯೆ ಕುರಿತು ಬಿಡುಗಡೆಯಾದ ಕುಂಕುಮಧಾರಿ ಆರೋಪಿಗಳ ಶಂಕಿತ ರೇಖಾಚಿತ್ರದ ಕುರಿತು ಗೋಪಾಲ ಅವರನ್ನು ಪ್ರಶ್ನಿಸಿದಾಗ, ಗೌರಿ ಹತ್ಯೆ ವಿಚಾರ ದುಃಖ ತಂದಿದೆ. ಕುಂಕುಮ ಪ್ರದರ್ಶನ ಹಿಂದೆ ರಾಜಕೀಯ ಇರಬಹುದು. ಕಾಂಗ್ರೆಸ್‌ ಸರಕಾರ ಬಂದಾಗಿನಿಂದ ಸಂಘ ಪರಿವಾರ ಟಾರ್ಗೆಟ… ಆಗಿದೆ. ಕಲುºರ್ಗಿ ಹತ್ಯೆ ನಡೆದಾಗಲೂ ಸಂಘ ಪರಿವಾರ ಟಾರ್ಗೆಟ… ಆಗಿತ್ತು. ಆದರೆ
ಇದುವರೆಗೂ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಲೇ  ಇದೆ. ಸಿದ್ದರಾಮಯ್ಯ ಬಜರಂಗದಳ ನಾಶದ ಬಗ್ಗೆ ಮಾತನಾಡುತ್ತಲೇ ಬಂದಿ¨ªಾರೆ. ತನಿಖೆ ಯಾಗಲಿ, ಸತ್ಯ ಹೊರಬರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next