Advertisement
ತಿರತ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಧಾಮಿ ತಮ್ಮ 45 ನೇ ವಯಸ್ಸಿನಲ್ಲಿ ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿದ್ದಲ್ಲದೇ, ರಾಜ್ಯದ ಮೊದಲ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನ್ನುವುದಕ್ಕೆ ಪಾತ್ರರಾಗಿದ್ದಾರೆ .
ಇದನ್ನೂ ಓದಿ : ಕೋವಿಡ್:ಬಾಗಲಕೋಟೆ-ಯಾದಗಿರಿಯಲ್ಲಿಂದು ಶೂನ್ಯ ಪ್ರಕರಣ; ರಾಜ್ಯದಲ್ಲಿ ಪತ್ತೆಯಾದ ಕೇಸ್ ಎಷ್ಟು ?
Related Articles
Advertisement
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಸೇರಿ ಹಲವು ಪ್ರಮುಖ ನಾಯಕರು ತಮ್ಮ ಅಧಿಕೃತ ಟ್ವೀಟರ್ ಮೂಲಕ ಶುಭಾಶಯ ಕೋರಿದ್ದಾರೆ.
ಡೆಹ್ರಾಡೂನ್‌ನ ರಾಜ್ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ಉತ್ತರಾಖಂಡ ಅಧ್ಯಕ್ಷ ಮದನ್ ಕೌಶಿಕ್ ಸೇರಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಶುಕ್ರವಾರ, ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ರಾಜ್ಯಪಾಲರಿಗೆ ರಾಜಿನಾಮೆಯನ್ನು ಸಲ್ಲಿಸಿದ್ದರು. ಯಾರು ಪುಷ್ಕರ್ ಸಿಂಗ್ ಧಾಮಿ..? ಸೆಪ್ಟೆಂಬರ್ 16, 1975 ರಂದು ಉತ್ತರಾಖಂಡದ ಪಿಥೋಗರ್ ಜನಿಸಿದ ಧಾಮಿ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಇಂಡಸ್ಟ್ರಿಯಲ್ ರಿಲೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ಸೇವೆಸಲ್ಲಿಸುತ್ತಿದ್ದ ಅವರು ಪ್ರಸ್ತುತ ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಹಿನ್ನೆಲೆಯಿರುವ ಧಾಮಿ, 2002-2008ರವರೆಗೆ ಬಿಜೆಪಿಯ ಯುವ ವಿಭಾಗದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಯ ಉತ್ತರಾಖಂಡದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಉಧಮ್ ಸಿಂಗ್ ನಗರದ ಖತಿಮಾ ಕ್ಷೇತ್ರದ ಎರಡು ಬಾರಿ ಶಾಸಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇನ್ನು, 2001-2002ರವರೆಗೆ ಮಾಜಿ ರಾಜ್ಯ ಮುಖ್ಯಮಂತ್ರಿ ಭಗತ್ ಸಿಂಗ್ ಕೊಶಿಯಾರಿಗೆ ವಿಶೇಷ ಕರ್ತವ್ಯದ (ಒ ಎಸ್ ಡಿ) ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ಇದನ್ನೂ ಓದಿ : UAE ನಲ್ಲಿ ನಡೆದ ರಾಫಲ್ ಡ್ರಾದಲ್ಲಿ 40 ಕೋಟಿ ರೂ.ಗೆದ್ದ ಕೇರಳದ ರಂಜಿತ್