Advertisement

ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಎಷ್ಟು ಭಾರಿಯಾದರೂ ಜೈಲಿಗೆ ಹೋಗಲು ಸಿದ್ದ: ಕೇಜ್ರಿವಾಲ್

04:16 PM May 31, 2024 | Team Udayavani |

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2 ರಂದು ಮತ್ತೆ ಜೈಲಿಗೆ ಹೋಗುವುದಾಗಿ ಹೇಳಿದ ಅವರು ತಮ್ಮ ಕುಟುಂಬದ ಕಾಳಜಿ ವಹಿಸುವಂತೆ ದೆಹಲಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

ಈ ಕುರಿತು X ನಲ್ಲಿ ವಿಡಿಯೋ ಹಂಚಿಕೊಂಡ ಕೇಜ್ರಿವಾಲ್ ಜಾಮೀನಿನ ಅವಧಿ ಮುಗಿಯುವ ಕಾರಣ ಜೂನ್ 2 ರಂದು ಮತ್ತೆ ಜೈಲಿಗೆ ತೆರಳುತ್ತಿದ್ದೇನೆ ಆದರೆ ಈ ಬಾರಿ ನಾನು ಹೆಚ್ಚಿನ ಉತ್ಸಾಹದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅವರನ್ನು ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆದರೆ ಲೋಕ ಸಭಾ ಚುನಾವಣೆಯ ಪ್ರಚಾರದ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಜಾಮೀನು ನೀಡಿತ್ತು. ಭಾನುವಾರ ಮತ್ತೆ ತಿಹಾರ್ ಜೈಲಿಗೆ ಹಿಂತಿರುಗುತ್ತೇನೆ. ಈ ಜನರು ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ಉತ್ಸಾಹ ಹೆಚ್ಚಾಗಿದೆ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಎಷ್ಟು ಭಾರಿಯಾದರೂ ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದು ಹೇಳಿದರು.

ನನ್ನ ತೇಜೋವದೆ ಮಾಡುವ ಎಲ್ಲ ಕೆಲಸಗಳನ್ನು ಮಾಡಿದರು ಆದರೆ ಅದು ಯಶಸ್ವಿಯಾಗಲಿಲ್ಲ. ನಾನು ಜೈಲಿನಲ್ಲಿದ್ದಾಗ ಅವರು ನನ್ನನ್ನು ಹಲವು ರೀತಿಯಲ್ಲಿ ಹಿಂಸಿಸುತ್ತಿದ್ದರು. ಅವರು ನನ್ನ ಔಷಧಿಗಳನ್ನು ನಿಲ್ಲಿಸಿದರು, ಜೈಲಿಗೆ ಹೋದಾಗ 70 ಕೆಜಿ ಇದ್ದ ನನ್ನ ತೂಕ ಇಂದು 64 ಕೆಜಿಗೆ ಇಳಿದಿದೆ. ಜೈಲಿನಿಂದ ಹೊರಬಂದ ನಂತರವೂ ನನ್ನ ತೂಕ ಹೆಚ್ಚಾಗುತ್ತಿಲ್ಲ. ಇದು ದೇಹದಲ್ಲಿ ಕೆಲವು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.

ನಾನು ಭಾನುವಾರ ಶರಣಾಗಲು ಮಧ್ಯಾಹ್ನ 3 ಗಂಟೆಗೆ ನನ್ನ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನ್ನನ್ನು ಹೆಚ್ಚು ಹಿಂಸಿಸುವ ಸಾಧ್ಯತೆಯಿದೆ, ಆದರೆ ನಾನು ತಲೆಬಾಗುವುದಿಲ್ಲ, ನಾನು ಎಲ್ಲಿದ್ದರೂ ದೆಹಲಿಯ ಕೆಲಸ ನಿಲ್ಲಿಸಲು ಬಿಡುವುದಿಲ್ಲ. ಉಚಿತ ವಿದ್ಯುತ್, ಮೊಹಲ್ಲಾ ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಉಚಿತ ಔಷಧಗಳು, 24 ಗಂಟೆಗಳ ವಿದ್ಯುತ್ ಮತ್ತು ಇತರ ಹಲವು ಸವಲತ್ತುಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ, ಮುಂದುವರಿಯುತ್ತವೆ ಎಂದರು .

Advertisement

ನನ್ನ ತಂದೆ ತಾಯಿ ತುಂಬಾ ವಯಸ್ಸಾದವರು. ನನ್ನ ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿರುವಾಗ ಅವರ ಆರೋಗ್ಯದ ಬಗ್ಗೆ ನನಗೆ ತುಂಬಾ ಚಿಂತೆ ಇದೆ ಹಾಗಾಗಿ ನಾನು ಜೈಲಿನಲ್ಲಿರುವ ಸಮಯದಲ್ಲಿ ನನ್ನ ಹೆತ್ತವರನ್ನು ನೋಡೊಕೊಳ್ಳಿ ಎಂದು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next