ವಾಸಿಂಗ್ಟನ್ : ಬಿಲಿಯನೇರ್ ಎಲೋನ್ ಮಸ್ಕ್ ಅವರ ತಾಯಿ ಮೇಯ್ ಮಸ್ಕ್, ಟ್ವೀಟರ್ ನಲ್ಲಿ ಎಲೋನ್ ಮಸ್ಕ್ ಅವರ ಬಗೆಗಿನ ಒಂದು ಕುತೂಹಲಕಾರಿ ವಿಷಯವೊಂದನ್ನು ಟ್ವೀಟ್ ಮಾಡಿದ್ದಾರೆ.
ಟೆಸ್ಲಾ ಕಂಪೆನಿಯ ಸಿಇಒ ಎಲೋನ್ ಮಸ್ಕ್, 17 ನೇ ವಯಸ್ಸಿನಲ್ಲಿದ್ದಾಗ ಕಂಪ್ಯೂಟರ್ ಆ್ಯಪ್ಟಿಟ್ಯೂಡ್ ಟೆಸ್ಟ್ ನಲ್ಲಿ ತೆಗೆದುಕೊಂಡು ರಿಸಲ್ಟ್ ಬಗ್ಗೆ ಇರುವ ಒಂದು ಪತ್ರವನ್ನು ಅವರ ತಾಯಿ ಮೇಯ್ ಮಸ್ಕ್ ಜಗತ್ತಿಗೆ ಟ್ವೀಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ, ಪ್ರಿಟೋರಿಯಾ ವಿಶ್ವವಿದ್ಯಾಲಯದ ಮಾಹಿತಿ ನಿರ್ವಹಣಾ ನಿರ್ದೇಶಕರ ಸಹಿ ಇರುವ ಒಂದು ಪತ್ರವನ್ನು ಅವರ ತಾಯಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಓದಿ : ದೂರುದಾರರಿಗೆ 50 ಸಾವಿರ ದಂಡ, ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯ ದೇಶದ್ರೋಹವಲ್ಲ: ಸುಪ್ರೀಂ
Related Articles
1989 ನೇ ವರ್ಷದ ಈ ಪತ್ರದಲ್ಲಿ, ಕಂಪ್ಯೂಟರ್ ಪ್ರೋಗ್ರಾಂಮಿಂಗ್ ಮತ್ತು ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಎಲೋನ್ ಮಸ್ಕ್ ಗೆ ಪರೀಕ್ಷೆಯನ್ನು ನಡೆಸಲು ನಾನು ISM(SM)ಗೆ ವಿನಂತಿಸಿಕೊಂಡಿದ್ದೇನೆ. ದಿ ರಿಸಲ್ಟ್ ವಾಸ್ ಔಟ್ ಸ್ಟ್ಯಾಂಡಿಂಗ್ ಅಂತ ಅವರ ತಾಯಿ ಹಂಚಿಕೊಂಡ ಲೆಟರ್ ನಲ್ಲಿ ಇದೆ.
“ನಿನಗೆ 17 ನೇ ವಯಸ್ಸಿನಲ್ಲಿದ್ದಾಗ ಕಂಪ್ಯೂಟರ್ ಆ್ಯಪ್ಟಿಟ್ಯೂಡ್ ಟೆಸ್ಟ್ ನನಗೆ ಸಿಕ್ಕಿದೆ. ನಾನು ಸರಿಯಾಗಿ ನೆನಪಿಸಿಕೊಂಡರೆ, ಅವರು ನಿನ್ನನ್ನು ಮರುಪರಿಶೀಲಿಸಬೇಕಿತ್ತು, ಯಾಕಂದರೇ, ಅವರು ಮೊದಲು ಇಂತಹ ರಿಸಲ್ಟ್ ನ್ನು ನೋಡಿರಲಿಕ್ಕಿಲ್ಲ.” ನೀನು ಅಂತಹ ಅದ್ಭುತ ಎಂಜಿನಿಯರ್ ಆಗಿರುವುದರಲ್ಲಿ ಆಶ್ಚರ್ಯವೇನಿಲ್ಲ” ಎಂದು ಮಸ್ಕ್ ಅವರ ತಾಯಿ ಬರೆದುಕೊಂಡಿದ್ದಾರೆ.
ಆಪರೇಟಿಂಗ್ ಮತ್ತು ಪ್ರೊಗ್ರಾಮಿಂಗ್ ಎರಡರಲ್ಲೂ ಎಲೋನ್ ಮಸ್ಕ್ ಎ + ಗಳಿಸಿದ್ದಾರೆ ಎಂದು ತೋರಿಸುತ್ತದೆ.
ಇನ್ನು, ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ ಎಳೆಯ ದಿನಗಳ ಫೋಟೋಗಳನ್ನು ಕೂಡ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಓದಿ : ಕೋವಿಡ್ 19 ಎಫೆಕ್ಟ್: 2021ನೇ ಸಾಲಿನಲ್ಲಿ ಇಪಿಎಫ್ ಬಡ್ಡಿದರ ಇಳಿಕೆ ಸಾಧ್ಯತೆ?