Advertisement

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

07:26 AM Jan 23, 2022 | Team Udayavani |
ಮೇಷ:
ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನೇತೃತ್ವ ವಹಿಸಿದ ತೃಪ್ತಿ. ಹಿರಿಯರ ಗುರುಗಳ ಪ್ರೀತಿ ಸಂಪಾದನೆ. ಗಣ್ಯರ ಭೇಟಿ ಸ್ಥಾನಮಾನ ವೃದ್ಧಿ. ಧನ ಸಂಪತ್ತಿನ ವಿಚಾರದಲ್ಲಿ ಸಂತೋಷ. ಬಂಧುಮಿತ್ರರಲ್ಲಿ ಬೇಸರ ಮಾಡದಿರಿ.
ವೃಷಭ:
ಗೃಹ ವಾಹನಾದಿ ಆಸ್ತಿ ವಿಚಾರದಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಮಾತಿನಲ್ಲಿ ದಾಕ್ಷಿಣ್ಯ ತೋರದೇ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣದಿಂದ ದೇಹಾಯಾಸ.
ಮಿಥುನ:
ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಸುಖ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ. ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ.
ಕಟಕ:
ಸಣ್ಣ ಹಾಗೂ ದೀರ್ಘ‌  ಪ್ರಯಾಣ ದಿಂದ ಅನುಕೂಲ. ಉದ್ಯೋಗ ವ್ಯವಹಾರ ಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರಗಳಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಗೃಹ ಸಂಬಂಧೀ ಖರ್ಚು. ಮಕ್ಕಳಿಂದ ಸುಖ.
ಸಿಂಹ:
ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಬರಬೇಕಾದ ಸಂಪತ್ತು ಪ್ರಾಪ್ತಿ. ಸಾಲ ನೀಡದಿರಿ. ಆಸ್ತಿ ವಿಚಾರದಲ್ಲಿ ಪ್ರಗತಿ.
ಕನ್ಯಾ:
ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ. ಸಾಂಸಾರಿಕ ಸುಖ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರುವ ಸಮಯ.
ತುಲಾ:
ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕಲ ವಿಧದ ಲಾಭ. ಪಾಂಡಿತ್ಯ ಸುಖಾದಿಗಳು ವೃದ್ಧಿ. ಸ್ತ್ರೀ ಪುರುಷರಿಗೆ ಪರಸ್ಪರರ ಸಹಕಾರ. ಉತ್ತಮ ಧನ ಸಂಚಯನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ:
ಆರೋಗ್ಯ ವೃದ್ಧಿ. ಅನಿರೀಕ್ಷಿತ ಸ್ಥಾನ ಸುಖಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಮುನ್ನಡೆ. ಹಿರಿಯ ಅಧಿಕಾರಿಗಳ ಸಹಕಾರ ಪ್ರೋತ್ಸಾಹಾದಿ ಲಾಭ. ಮಾನಸಿಕ ತೃಪ್ತಿ. ನೂತನ ಮಿತ್ರರ ಸಮಾಗಮ.
ಧನು:
ಉತ್ತಮ ದೈಹಿಕ ಮಾನಸಿಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ವಿವೇಕತೆ, ಶ್ರಮದಿಂದ ಅಭಿವೃದ್ಧಿ. ಧನಾರ್ಜನೆಗೆ ಕೊರತೆ ಕಾಣದು. ಪಾಲುದಾರರಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ಹಿರಿಯರ ಆರೋಗ್ಯ ಗಮನಿಸಿ.
ಮಕರ:
ಧೈರ್ಯ ಪರಾಕ್ರಮ ಸ್ಥಿರ ಬುದ್ಧಿಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಕಾರ. ಹಣಕಾಸಿನ ವಿಚಾರದಲ್ಲಿ ಏರಿಳಿತವಾದರೂ ಲಾಭಾಂಶ ವೃದ್ಧಿ. ಪರವೂರ ಸಹೋದ್ಯೋಗಿಗಳಿಂದ ಸಹಕಾರ ವೃದ್ಧಿ.
ಕುಂಭ:
ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಗೌರವಾದಿ ಸುಖ. ಅಧಿಕ ಧನಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಸ್ಥಳಗಳ ಸಂದರ್ಶನ. ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳ ಲಾಭ.
ಮೀನ:
ಆರೋಗ್ಯ ವೃದ್ಧಿ. ದೈನಂದಿನ ಉದ್ಯೋಗ ವ್ಯವಹಾರಗಳಲ್ಲಿ ಸುದೃಢತೆ. ಸ್ಥಾನ ಮಾನ ಗೌರವ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ತಾಳ್ಮೆ ಸಹನೆ ಅಗತ್ಯ. ದೀರ್ಘ‌ ಪ್ರಯಾಣ ಸಂಭವ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ತೃಪ್ತಿದಾಯಕ.
Advertisement

Udayavani is now on Telegram. Click here to join our channel and stay updated with the latest news.

Next