Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:17 AM Mar 30, 2022 | Team Udayavani |

ಮೇಷ:

Advertisement

ಘರ್ಷಣೆಗೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಲಭ್ಯ. ಧನಾಗಮನ ಅತ್ಯುತ್ತಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿ.

ವೃಷಭ:

ಧಾರ್ಮಿಕ ಕ್ಷೇತ್ರ ಸಂದರ್ಶನ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹೆಚ್ಚಿನ ನಿರೀಕ್ಷೆ ಸಲ್ಲದು.

ಮಿಥುನ:

Advertisement

ನಿರೀಕ್ಷೆಯಂತೆ ಉತ್ತಮ ವಾಕ್‌ಚತುರತೆಯಿಂದ ಹೆಚ್ಚಿದ ಧನಲಾಭ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಪ್ರೋತ್ಸಾಹ ಸಹಕಾರ. ವಿದ್ಯಾರ್ಜನೆಯಲ್ಲಿ ತಲ್ಲೀನತೆ.

ಕಟಕ:

ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ನೆಮ್ಮದಿ ಲಭಿಸೀತು. ಗುರುಹಿರಿಯರಲ್ಲಿ ಚರ್ಚೆಗೆ ಆಸ್ಪದ ನೀಡದಿರಿ.

ಸಿಂಹ:

ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವಹಾರದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಿಸಿ.

ಕನ್ಯಾ:

ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಹೆಚ್ಚಿದ ವರಮಾನ. ಮಕ್ಕಳಿಂದ ಹೆಚ್ಚಿದ ಸಂತೋಷ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ.

ತುಲಾ:

ದೀರ್ಘ‌ ಪ್ರಯಾಣ. ಅಧ್ಯಯನದಲ್ಲಿ ತತ್ಪರತೆ. ಧಾರ್ಮಿಕ ವಿಚಾರಗಳಲ್ಲಿ ಪಾಲ್ಗೊಳ್ಳು ವಿಕೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖದಲ್ಲಿ ಸಂತೋಷ ವೃದ್ಧಿ. ಪರಸ್ಪರ ಸಹಕಾರ.

ವೃಶ್ಚಿಕ:

ಉದಾರತೆ ಧೈರ್ಯ ಪರಾಕ್ರಮದಿಂದ ಕೂಡಿದ ದಿನಚರಿ. ಸ್ಪರ್ಧೆಗಳಲ್ಲಿ ಜಯ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಹಣಕಾಸಿನ ವಿಚಾರದಲ್ಲಿ ಏರಿಳಿತ ಸಂಭವ. ದಾಂಪತ್ಯ ತೃಪ್ತಿಕರ.

ಧನು:

ಆರೋಗ್ಯ ವೃದ್ಧಿ. ಬಂಧುಮಿತ್ರರ ಭೇಟಿ. ಗುರುಹಿರಿಯರ ಆಶೀರ್ವಾದ. ದೂರ ಪ್ರಯಾಣಕ್ಕೆ ದೇವತಾ ಸ್ಥಳ ಸಂದರ್ಶನಕ್ಕೆ ಅವಕಾಶ ಒದಗಿ ಬಂದೀತು. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ.

ಮಕರ:

ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಉತ್ತಮ ಬೆಳವಣಿಗೆ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಮಕ್ಕಳೊಂದಿಗೆ ಸಂತೋಷದ ಸಮಯ. ಗುರುಹಿರಿಯರಲ್ಲಿ ಚರ್ಚೆ ಸಂಭವ.

ಕುಂಭ:

ನಿರೀಕ್ಷಿಸಿದಂತೆ ಸ್ಥಾನ ಗೌರವಾದಿ ಲಭಿಸಿದ ಖುಷಿ. ಸ್ಪರ್ಧೆಗಳಿಂದ  ಜಯ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ ಸನ್ನಿವೇಶ.

ಮೀನ:

ಉತ್ತಮ ಆರೋಗ್ಯ.ಸ್ವಪ್ರಯತ್ನದಿಂದ ಕೂಡಿದ ಕಾರ್ಯ ವೈಖರಿ. ಭೂಮಾದಿ ವಿಚಾರಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಆರ್ಥಿಕ ಅಭಿವೃದ್ಧಿ. ಮಿತ್ರರಿಂದ ಸಹಕಾರ. ದೂರ ಪ್ರಯಾಣದಲ್ಲಿ ವಿಳಂಬ. ಅನ್ಯರ ಸಹಾಯ ನಿರೀಕ್ಷಿಸದಿರಿ.

Advertisement

Udayavani is now on Telegram. Click here to join our channel and stay updated with the latest news.

Next