Advertisement
ಅತಿಯಾದ ಧಾರಾಳಿತನ ದಾನ ಧರ್ಮದಿಂದ ಆರ್ಥಿಕ ತೊಂದರೆ ಸಂಭವ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಅರಣ್ಯ ಪ್ರದೇಶ ಮಾರ್ಗ ಪ್ರಯಾಣ.
Related Articles
Advertisement
ಜಲೋತ್ಪನ್ನ ವಸ್ತುಗಳ ವ್ಯವಹಾರ ದಿಂದ ಲಾಭ. ಮಿತ್ರರಲ್ಲಿ ಗುರುಹಿರಿಯರಲ್ಲಿ ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ ಗುರಿ ತಲುಪಿ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ನಿರೀಕ್ಷಿತ ಧನಲಾಭ.
ಕಟಕ:
ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವರಿಂದ ಮೋಸ ಹೋಗದಿರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ. ನಿರೀಕ್ಷಿತ ಧನಾಗಮ. ಗೃಹೋಪಯೋಗಿ ವಸ್ತುಗಳ ವಾಹನಾದಿ ವಿಚಾರದಲ್ಲಿ ಶುಭಫಲ.
ಸಿಂಹ:
ದೀರ್ಘ ಪ್ರಯಾಣ. ದೈಹಿಕ ಶ್ರಮ ವಿದ್ದರೂ ಉತ್ತಮ ಬುದ್ಧಿಶಕ್ತಿ, ಧೈರ್ಯ ಶೌರ್ಯ ಉದಾರಾದಿ ಗುಣಗಳಿಂದ ಕಾರ್ಯ ಕ್ಷೇತ್ರ ದಲ್ಲಿ ಜನಮನ್ನಣೆ. ಪಾಲುದಾರಿಕಾ ವ್ಯವಹಾರಸ್ಥರು ಪರಊರಿನಲ್ಲಿದ್ದರೂ ಉತ್ತಮ ಪ್ರೋತ್ಸಾಹ ನೀಡುವರು.
ಕನ್ಯಾ:
ಮಿತ್ರರಲ್ಲಿ, ಪಾಲುದಾರರಲ್ಲಿ ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ. ನಿರೀಕ್ಷಿತ ಲಾಭ ಪಡೆಯಿರಿ. ಜಲೋತ್ಪನ್ನ ವಸ್ತುಗಳ ದೀರ್ಘ ಪ್ರಯಾಣದ ವ್ಯವಹಾರ ಗಳು ಲಾಭದಾಯಕವಾಗಿರುವುದು.
ತುಲಾ:
ಆಸ್ತಿ ವಿಚಾರದಲ್ಲಿ ತಲ್ಲೀನತೆ ಹಾಗೂ ಅನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿದಾಯಕ ಬದಲಾವಣೆ. ಪ್ರಗತಿದಾಯಕ ಬದಲಾವಣೆ.
ವೃಶ್ಚಿಕ:
ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತನದಿಂದ ಕಿರಿಕಿರಿ ಆದೀತು. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ.ಸಾಂಸಾರಿಕ ಸುಖ ಮಧ್ಯಮ.
ಧನು:
ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದಲ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋನ್ಮುಖ ರಾಗಿ. ನಿಷೂuರ ಆಗದಂತೆ ಎಚ್ಚರ ವಹಿಸಿ.
ಮಕರ:
ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾ ವಹಿಸಿ. ಗುರುಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕುಂಭ:
ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ಗುರುಹಿರಿಯರ ಆರೋಗ್ಯ ಮಧ್ಯಮ. ವಾಕ್‌ಚತುರತೆ ಪ್ರದರ್ಶನ. ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ:
ಸಣ್ಣ ಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫಲತೆ. ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ.