Advertisement

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:23 AM Mar 20, 2022 | Team Udayavani |

ಮೇಷ:

Advertisement

ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಉತ್ತಮ ವರಮಾನ. ಅವಿವಾಹಿತ ರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರುಹಿರಿಯರಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಆರೋಗ್ಯ ವೃದ್ಧಿ

ವೃಷಭ:

ನೂತನ ಜನರ ಭೇಟಿ. ದೀರ್ಘ‌ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿ. ಅಧ್ಯಯನಶೀಲರಿಗೆ ದೂರ ಪ್ರಯಾಣ ಸಂಭವ

ಮಿಥುನ:

Advertisement

ಹೆಚ್ಚಿದ ಜವಾಬ್ದಾರಿಯಿಂದ ಆರೋಗ್ಯದಲ್ಲಿ ಏರುಪೇರು. ದೇಹಾಯಾಸ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಗುರುಹಿರಿಯರಿಂದ ಸರಿಯಾದ ಮಾರ್ಗದರ್ಶನ. ಹಣಕಾಸಿನ ವಿಚಾರದಲ್ಲಿ ಶಿಸ್ತು ಅಗತ್ಯ

ಕಟಕ:

ಉತ್ತಮ ಆರೋಗ್ಯ. ಪಾಲುದಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ನಿರೀಕ್ಷೆಯಂತೆ ಧನಾಗಮ ಪ್ರಾಪ್ತಿ. ಗುರುಹಿರಿಯರೊಂದಿಗೆ ನಿಷ್ಠುರ ಮಾಡಿಕೊಳ್ಳದಿರಿ. ಮನೋರಂಜನೆಯಲ್ಲಿ ಸಮಯ ಕಳೆಯುವಿಕೆ

ಸಿಂಹ:

ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗದಲ್ಲಿ ಪರರ ಸಹಕಾರದಿಂದ ಗುರಿ ಸಾಧನೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಪತ್ರ ದಾಖಲೆಯಿಂದ ನೆಮ್ಮದಿ.

ಕನ್ಯಾ:

ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಉತ್ತಮ ವಾಕ್‌ಪಟುತ್ವ. ದಾಂಪತ್ಯದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ. ಆದಾಯಕ್ಕೆ ಸರಿಯಾಗಿ ಉಳಿತಾಯ ಸಂಭವ

ತುಲಾ:

ಆರೋಗ್ಯ ಸುದೃಢ. ದೈಹಿಕ ವಾಗಿಯೂ ಮಾನಸಿಕವಾಗಿಯೂ ಸಂತೋಷಪ್ರದ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅಧ್ಯಯನ ಪ್ರವೃತ್ತಿಯವರಿಗೆ ಸದವಕಾಶ ಲಭ್ಯ. ಸಾಂಸಾರಿಕ ಸುಖ ಮಧ್ಯಮ

ವೃಶ್ಚಿಕ:

ಉತ್ತಮ ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಮನೆಯಲ್ಲಿ ಸಂತಸದ ವಾತಾವರಣ. ದೀರ್ಘ‌ ಪ್ರಯಾಣಗಳಿಂದ ನಿರೀಕ್ಷಿತ ಕಾರ್ಯಗಳಲ್ಲಿ ಪ್ರಗತಿ

ಧನು:
ಮಾನಸಿಕ ಗೊಂದಲಗಳಿದ್ದರೂ ಶಾರೀರಿಕ ಸುಖ ಉತ್ತಮ. ಅನಿರೀಕ್ಷಿತ ಧನಾಗಮ. ಮಾತಿನಲ್ಲಿ ಎಚ್ಚರವಿರಲಿ. ಸಹೋದ್ಯೋಗಿ ಗಳ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ ಸಂಭವ. ನೂತನ ಮಿತ್ರರ ಸಮಾಗಮ
ಮಕರ:
ಆರೋಗ್ಯ ಉತ್ತಮ ಆದರೂ ಶಿಸ್ತಿನ ಕೊರತೆ ಆಗದಂತೆ ಗಮನಹರಿಸಿ. ವಾಕ್‌ಚತುರತೆಯಿಂದ ಕೆಲಸ ಕಾರ್ಯಗಳಲ್ಲಿ ಜಯ. ಉತ್ತಮ ಧನಾರ್ಜನೆ. ಸಹೋದರಸಮಾನರಿಂದ ಉತ್ತಮ ಸಹಕಾರ ಸ್ಪಂದನ.
ಕುಂಭ:
ಮಧ್ಯಮ ಆರೋಗ್ಯ. ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ನಿರೀಕ್ಷಿತ ಪ್ರಗತಿ. ದೂರ ಪ್ರಯಾಣ ಸಂಭವ. ಅಧಿಕ ಧನಾರ್ಜನೆ. ಮಿತ್ರರಿಂದಲೂ ಬಂಧುಗಳಿಂದಲೂ ಉತ್ತಮ ಸಹಕಾರ. ಪರಿಶ್ರಮದಿಂದ ಕೂಡಿದ ದಿನ
ಮೀನ:
ಆರೋಗ್ಯ ಉತ್ತಮ. ಧನಾರ್ಜನೆ ತೃಪ್ತಿದಾಯಕ. ಅನ್ಯರ ಸಹಾಯ ದೊರಕದು. ಸ್ವಂತ ಪರಿಶ್ರಮದ ಮೇಲೆ ಗಮನವಿರಲಿ. ವ್ಯವಹಾರ ಉದ್ಯೋಗ ಸಾವದಾನದ ಪ್ರಗತಿ. ವಿದ್ಯಾರ್ಥಿಗಳಿಗೆ , ಗುರುಹಿರಿಯರಿಗೆ ಸಂತೋಷದಿಂದ ಕೂಡಿದ ದಿನ. ಮನೆಯಲ್ಲಿ ಚರ್ಚೆಗೆ ಅವಕಾಶ ನೀಡದಿರಿ
Advertisement

Udayavani is now on Telegram. Click here to join our channel and stay updated with the latest news.

Next