ಕಾಸರಗೋಡು: ದೀರ್ಘ ಕಾಲದ ಗುರಿಯೊಂದಿಗೆ ಆಸ್ಟ್ರೋ ಪ್ರವಾಸೋದ್ಯಮ ಯೋಜನೆಗಳನ್ನು ಬೇಕಲ ರೆಸಾರ್ಟ್ ಡೆವಲಪ್‌ಮೆಂಟ್ ಕಾರ್ಪೋರೇಶನ್ (ಬಿಆರ್‌ಡಿಸಿ) ರೂಪಿಸಿದೆ.
ನಾನಾ ಸ್ಮೈಲ್ ಉದ್ಯಮಿಗಳ ಮೂಲಕ ಪ್ರಸಿದ್ಧ ಖಗೋಳ ವಿಜ್ಞಾನ ಸಂಸ್ಥೆಯಾದ ಆಸ್ಟ್ರೋ (ಖಗೋಳ ಅಧ್ಯಯನ, ತರಬೇತಿ ಮತ್ತು ಸಂಶೋಧನ ಸಂಸ್ಥೆ) ಯ ತಾಂತ್ರಿಕ ಸಹಕಾರದೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಪ್ರದೇಶದ ಸುಂದರ ನೋಟಗಳೊಂದಿಗೆ ಆಕಾಶದ ಆಕರ್ಷಣೆ ಜತೆಗೆ ಪ್ರವಾಸಿಗರನ್ನು ಮಲಬಾರಿಗೆ ತಲುಪಿಸುವುದು.
ದೊಡ್ಡ ನಗರಗಳಿಗೆ ಹೋಲಿಸಿದರೆ ಬೆಳಕಿನ ಮಾಲಿನ್ಯ (ಲೈಟ್ ಪೊಲ್ಯೂಶನ್) ಇಲ್ಲದೆ ಭೂ ಮಧ್ಯ ರೇಖೆಗೆ ಸಮೀಪವಿರುವ ಉತ್ತರ ಮಲಬಾರಿನ ಕೆಲವು ಪ್ರದೇಶಗಳು ಆಸ್ಟ್ರೋ ಪ್ರವಾಸೋ ದ್ಯಮಕ್ಕೆ ಅನುಕೂಲಕರವಾದ ಅಂಶವಾಗಿದೆ. ಬೆಳಕಿನ ಮಾಲಿನ್ಯವಿಲ್ಲದ ಆಕಾಶವನ್ನು ಆಸ್ಟ್ರೋ ಪ್ರವಾಸಿಗಳು ವಿಶೇಷವಾಗಿ ಇಷ್ಟಪಡುತ್ತಾರೆ. ಇಂತಹ ಪ್ರವಾಸಿಗರಿಗಾಗಿ ಹೋಂ ಸ್ಟೇಗಳು, ಟೆಂಟ್‌ಗಳು, ಬೀಚ್‌ಗಳು, ಹಿನ್ನೀರು ತಟಗಳನ್ನು ಸಿದ್ಧಪಡಿಸಲಾಗಿದೆ. ಆಕಾಶ, ನಕ್ಷತ್ರಗಳು, ನಕ್ಷತ್ರ ಪುಂಜಗಳು, ನೀಹಾರಿಕೆಗಳು, ಸೂರ್ಯ, ಚಂದ್ರ, ಗ್ರಹಣ, ಡಾರ್ಕ್ ಸ್ಕೈ ಮತ್ತಿತರ ವಿಷಯಗಳ ಕುರಿತು ಪ್ರವಾಸಿಗರಿಗೆ ಮನದಟ್ಟು ಮಾಡಿಕೊಡುವ ಪ್ಯಾಕೇಜ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬಗ್ಗೆ ಸ್ಮೈಲ್ ಉದ್ಯಮಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಏರೋನಾಟಿಕ್ಸ್ ವಲಯದಲ್ಲಿ ತಜ್ಞರಾದ ಗಂಗಾಧರನ್ ವೆಲ್ಲೂರು, ಕೆ.ಟಿ.ಎನ್. ಭಾಸ್ಕರನ್, ಕೆ.ಪಿ. ರವೀಂದ್ರನ್ ಮತ್ತಿತರರು ತರಗತಿ ನಡೆಸಿಕೊಟ್ಟರು. ಜನವರಿ ತಿಂಗಳಲ್ಲಿ ಮತ್ತೆ ತರಬೇತಿ ನೀಡಿ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗುವುದು.ಇದಲ್ಲದೆ ಈ ಬಾರಿ ನಡೆಯಲಿರುವ ಬೃಹತ್ ಸೂರ್ಯ ಗ್ರಹಣ ಎನ್ನುವ ಗಗನ ವಿಸ್ಮಯವನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಜಿಲ್ಲೆಯ ಸಾರ್ವಜನಿಕರಿಗೆ ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದೆ. ಅದರಂತೆ ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಕಾಡಂಗೋಡಿನಲ್ಲಿ ವೀಕ್ಷಣೆಗಾಗಿ ಸರ್ವ ಸಿದ್ಧತೆ ಮಾಡಲಾಗಿದೆ.
ಡಿ. 26ರಂದು ಬೆಳಗ್ಗೆ 8.04ಕ್ಕೆ ಆರಂಭಗೊಳ್ಳುವ ಗ್ರಹಣ 9.25 ರ ವೇಳೆಗೆ ಪೂರ್ಣ ರೂಪ ತಲುಪಲಿದೆ. ಮೂರು ನಿಮಿಷ 12 ಸೆಕೆಂಡ್‌ವರೆಗೆ ಮುಂದುವರಿದು 11.04ರ ವೇಳೆಗೆ ಸಮಾಪ್ತಿಗೊಳ್ಳಲಿದೆ. ಭಾರತದಲ್ಲಿ ಮೊದಲಿಗೆ ಕಾಣಿಸುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ. ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸ್ಪೇಸ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಇದಲ್ಲದೆ ಈ ಬಾರಿ ನಡೆಯಲಿರುವ ಬೃಹತ್ ಸೂರ್ಯ ಗ್ರಹಣ ಎನ್ನುವ ಗಗನ ವಿಸ್ಮಯವನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಜಿಲ್ಲೆಯ ಸಾರ್ವಜನಿಕರಿಗೆ ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದೆ. ಅದರಂತೆ ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಕಾಡಂಗೋಡಿನಲ್ಲಿ ವೀಕ್ಷಣೆಗಾಗಿ ಸರ್ವ ಸಿದ್ಧತೆ ಮಾಡಲಾಗಿದೆ.
ಡಿ. 26ರಂದು ಬೆಳಗ್ಗೆ 8.04ಕ್ಕೆ ಆರಂಭಗೊಳ್ಳುವ ಗ್ರಹಣ 9.25 ರ ವೇಳೆಗೆ ಪೂರ್ಣ ರೂಪ ತಲುಪಲಿದೆ. ಮೂರು ನಿಮಿಷ 12 ಸೆಕೆಂಡ್‌ವರೆಗೆ ಮುಂದುವರಿದು 11.04ರ ವೇಳೆಗೆ ಸಮಾಪ್ತಿಗೊಳ್ಳಲಿದೆ. ಭಾರತದಲ್ಲಿ ಮೊದಲಿಗೆ ಕಾಣಿಸುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ.
ಈ ಪ್ರದೇಶದ ಭೌಗೋಳಿಕ ವೈಶಿ ಷ್ಟé ದಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುತ್ತಿರುವ ಸ್ಪೇಸ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಸೂರ್ಯಗ್ರಹಣ ವೀಕ್ಷಣೆ: ವಿದೇಶಿ ಪ್ರವಾಸಿಗರ ದಂಡು
ಡಿ. 26ರಂದು ಸಂಭವಿಸುವ ಅಪೂರ್ವವಾದ ಸೂರ್ಯ ಗ್ರಹಣವನ್ನು ವೀಕ್ಷಿಸಲು ದೇಶ- ವಿದೇಶಗಳಿಂದ ಅನೇಕ ಮಂದಿ ಪ್ರವಾಸಿಗರು ಉತ್ತರ ಮಲಬಾರಿಗೆ ಆಗಮಿಸಿದ್ದಾರೆ. ಏರೋನಾಟಿಕ್ಸ್ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಬಿಆರ್‌ಡಿಸಿ ಈ ಅವಧಿಗೆ ಪ್ರತ್ಯೇಕ ಪ್ಯಾಕೇಜ್‌ಗಳನ್ನು ಅಭಿವೃದ್ಧಿ ಪಡಿಸಿಕೊಂಡಿದೆ.