Advertisement

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

12:07 PM Nov 03, 2015 | Mithun PG |

ಬ್ರೆಜಿಲ್: ಕೋವಿಡ್-19 ಔಷಧದ ಕ್ಲಿನಿಕಲ್ ಪ್ರಯೋಗದ ಸಂದರ್ಭದಲ್ಲಿ ಸ್ವಯಂಸೇವಕರೊಬ್ಬರು ಮೃತಪಟ್ಟ ಘಟನೆ ಬ್ರೆಜಿಲ್ ನಡೆದಿದೆ. ಔಷಧ ತಯಾರಕ ಸಂಸ್ಥೆ ಆಸ್ಟ್ರಾಜೆನಾಕ (AZN.L) ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಈ ಪ್ರಯೋಗ ನಡೆದಿತ್ತು ಎಂದು ಬ್ರೆಜಿಲ್ ನ ಆರೋಗ್ಯ ಪ್ರಾಧಿಕಾರ ಅನ್ವಿಸಾ (ನ್ಯಾಷನಲ್ ಸ್ಯಾನಿಟರಿ ಸರ್ವೈಲೆನ್ಸ್ ಏಜೆನ್ಸಿ) ತಿಳಿಸಿದೆ.

Advertisement

ಆದರೇ ಬ್ರೆಜಿಲ್ ನಲ್ಲಿ ಮೃತಪಟ್ಟ ಸ್ವಯಂಸೇವಕ ಆಸ್ಟ್ರಾಜೆನಕಾ ಕಂಪೆನಿಯ ಲಸಿಕೆಯ ಪ್ರಯೋಗಕ್ಕೆ ಒಳಪಟ್ಟಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಕ್ಲಿನಿಕಲ್ ಟ್ರಯಲ್ ವೇಳೆ ಸಂಭವಿಸಿದ ದುರ್ಘಟನೆಯ ನಂತರವೂ ಲಸಿಕೆ ಪರೀಕ್ಷೆ ಮುಂದುವರೆಯುತ್ತಿದ್ದು, ಟ್ರಯಲ್ ನಲ್ಲಿ ಭಾಗವಹಿಸಿರುವವರ ಗೌಪ್ಯತೆ ಕಾಪಾಡಲಾಗುತ್ತಿದೆ ಎಂದು ಆರೋಗ್ಯ ಪ್ರಾಧಿಕಾರ ತಿಳಿಸಿದೆ.

ಆಸ್ಟ್ರಾಜೆನಕಾ ಪ್ರಯೋಗದಲ್ಲಿ ಪ್ರತಿಕೂಲ ಪರಿಣಾಮಗಳು ಕಂಡುಬಂದ ಪರಿಣಾಮ ಸಂಸ್ಥೆಯ ಶೇರುಗಳಲ್ಲಿ 1.7% ಇಳಿಕೆ ಕಂಡುಬಂದಿದೆ ಎಂದು ವರದಿಗಳು ತಿಳಿಸಿದೆ.

ಇದನ್ನೂ ಓದಿ: ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

ಈ ಬಗ್ಗೆ ಸಾಹೋ ಪೌಲೋದ ಫೆಢರಲ್ ವಿಶ್ವವಿದ್ಯಾನಿಲಯ ಕೂಡ ಕೂಡ ಪ್ರತಿಕ್ರಿಯೆ ನೀಡಿದ್ದು, ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಈ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ, ಸ್ವಯಂಸೇವಕರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಳಿಸಲಾಗುವುದಿಲ್ಲ. ಈ ಕುರಿತು ತನಿಖೆಗೆ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ.

Advertisement

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಕೂಡ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬ್ರೆಜಿಲ್ ನಲ್ಲಿ  ಕೋವಿಡ್ ವೈರಸ್ ಲಸಿಕೆ ಪ್ರಯೋಗದ ವೇಳೆ ನಡೆದ ದುರ್ಘಟನೆಯನ್ನು ಪರೀಕ್ಷಿಸಲಾಗಿದ್ದು, ಸಾವನ್ನಪ್ಪಿದ ಸ್ವಯಂಸೇವಕನಿಗೆ ಯಾವುದೇ ಲಸಿಕೆ ನೀಡಲಾಗಿಲ್ಲ.  ಕ್ಲಿನಿಕಲ್ ಪ್ರಯೋಗದ ಬಗ್ಗೆ ಕಳವಳಗಳಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ:  CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಕೋವಿಡ್ ವೈರಸ್  ಬ್ರೆಜಿಲ್ ನಲ್ಲೂ ಕೂಡ ಅಟ್ಟಹಾಸ ಮೆರೆದಿದೆ. ಈವರೆಗೂ 1.55 ಲಕ್ಷ ಜನರು ಮೃತಪಟ್ಟಿದ್ದು, 5.2 ಮಿಲಿಯನ್ ಜನರು ಸೋಂಕಿಗೆ ತುತ್ತಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next