Advertisement

ಬಿಡುಗಡೆಗೆ ಸಿದ್ದವಾಯ್ತು ಸಸ್ಪೆನ್ಸ್ ಥ್ರಿಲ್ಲರ್ ‘ಅಸ್ಥಿರ’

04:57 PM Feb 16, 2023 | Team Udayavani |

ಈ ಮೊದಲು “ಅಚಲಾ’ ಚಿತ್ರವನ್ನು ನಿರ್ದೇಶಿಸಿರುವ ಪ್ರಮೋದ್‌ ಎಸ್‌.ಆರ್‌ ಅವರ ಹೊಸ ಚಿತ್ರ “ಅಸ್ಥಿರ’ ತೆರೆಗೆ ಬರಲು ಸಿದ್ಧವಾಗಿದೆ. ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪಡೆದು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ಇದೇ 24 ರಂದು ತೆರೆಗೆ ಬರಲಿದೆ.

Advertisement

ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿರುವ ಚಿತ್ರತಂಡ ಇತ್ತೀಚೆಗೆ ತನ್ನ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು ಚಿತ್ರತಂಡ.

ನಿರ್ದೇಶಕ ಪ್ರಮೋದ್‌ ಎಸ್‌.ಆರ್‌ ಮಾತನಾಡಿ, “ಒಂದು ಲವ್‌ ಫೇಲ್ಯೂರ್‌ ಹುಡುಗ ಪಡುವ ಯಾತನೆ, ನೋವುಗಳನ್ನು ಅನುಭವಿಸುವ ರೀತಿಯನ್ನು ಇಲ್ಲಿ ಹೇಳಲಾಗಿದೆ. ಇಂತಹ ಘಟನೆಗಳನ್ನು ಇಟ್ಟುಕೊಂಡು ಜೊತೆಯಲ್ಲಿ ಸಸ್ಪೆನ್ಸ್‌ , ಥಿಲ್ಲರ್‌ ಕೂಡಾ ಸೇರಿಸಿ ಮಾಡಿರುವ ಚಿತ್ರ ಅಸ್ಥಿರ. ಕುಮಟಾ, ಹೊನ್ನಾವರ, ಬನ್ನೂರು ಮೈಸೂರು ಕಡೆಗಳಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಚಿತ್ರದಲ್ಲಿ 4ಹಾಡುಗಳು, 3 ಸಾಹಸ ದೃಶ್ಯಗಳಿವೆ. ಚಿತ್ರ ಇದೇ ತಿಂಗಳ 24 ರಂದು ತೆರೆಗೆ ಬರಲಿದೆ’ ಎಲ್ಲರೂ ನೋಡಿ ಹಾರೈಸಿ ಎಂದರು

ನಿರ್ಮಾಪಕ ಕಂ ನಾಯಕ ನಟ ಅನಿಲ್‌ ಸಿ.ಆರ್‌ ಮಾತನಾಡಿ, ಒಂದು ಹೊಸ ಬಗೆಯ ಹಾಗೂ ವಿಭಿನ್ನವಾಗಿ ಮಾಡಿದ ಕಥೆ ಅಸ್ಥಿರ. ಸಾಕಷ್ಟು ಚಿತ್ರಗಳನ್ನು ನೋಡಿದ್ದರಿಂದ ನಾವು ಒಂದು ರೀತಿಯಲ್ಲಿ ಸಸ್ಪೆನ್ಸ್‌ ಶೈಲಿ ಚಿತ್ರ ಮಾಡಬೇಕು ಅನ್ನುವ ಆಸೆಯಿಂದ ಈ ಚಿತ್ರ ನಿರ್ಮಿಸಿದ್ದೇವೆ ಎಂದರು.

ನಾಯಕಿ ಭುವನಾ ಮಾತನಾಡಿ, “ಅಸ್ಥಿರ ಒಂದು ಕುತೂಹಲಕಾರಿ ಚಿತ್ರ. ಪ್ರಾರಂಭದಿಂದ ಅಂತ್ಯದವರೆಗೂ ಒಂದಲ್ಲಾ ಒಂದು ಟ್ವಿಸ್ಟ್‌, ಸಸ್ಪೆನ್ಸ್‌ ಇದ್ದೇ ಇರುತ್ತದೆ. ನಿರ್ದೇಶಕರು ಬಿಟ್ಟು ಎಲ್ಲರೂ ನಾವು ಹೊಸ ಕಲಾವಿದರು’ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next