Advertisement

54 ವರ್ಷ ಹಿಂದೆ ಕಳಿಸಿದ್ದ ರಾಕೆಟ್‌ ಮತ್ತೆ ಭೂಮಿಯತ್ತ!

12:52 AM Oct 13, 2020 | mahesh |

ವಾಷಿಂಗ್ಟನ್‌: ಭೂಮಿಗೆ ಇನ್ನು ಕೆಲವೇ ದಿನಗಳಲ್ಲಿ ಬಂದು ಅಪ್ಪಳಿಸುತ್ತದೆ ಎಂಬ ಭೀತಿ ಸೃಷ್ಟಿಸಿದ್ದ, ಅಂತರಿಕ್ಷದಲ್ಲಿ ಅತಿ ವೇಗವಾಗಿ ಸಾಗಿಬರುತ್ತಿದ್ದ ನಿಗೂಢ ಆಕಾಶಕಾಯದ ನಿಜ ಸ್ವರೂಪ ಪತ್ತೆಯಾಗಿದೆ. ಅದು, 54 ವರ್ಷಗಳ ಹಿಂದೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಚಂದ್ರನಲ್ಲಿಗೆ ಕಳುಹಿಸಿದ್ದ ರಾಕೆಟ್‌ನ ಮೇಲ್ಭಾಗವಾಗಿದ್ದು, ಆಗ ನಾಪತ್ತೆಯಾಗಿದ್ದ ಅದು ಈಗ ಪುನಃ ಭೂಮಿಯತ್ತ ಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಎಚ್ಚರಿಸಿದ್ದ ವಿಜ್ಞಾನಿಗಳು: ಕೆಲವು ದಿನಗಳ ಹಿಂದೆ, ದೈತ್ಯ ವಸ್ತುವೊಂದು ವೇಗವಾಗಿ ಭೂಮಿಯ ಕಡೆಗೆ ನುಗ್ಗಿ ಬರುತ್ತಿದೆ ಎಂಬ ಮಾಹಿತಿಯೊಂದನ್ನು ಹವಾಯ್‌ ತಾರಾಲಯದ ವಿಜ್ಞಾನಿಗಳು ಹಂಚಿಕೊಂಡಿದ್ದರು. ಇದರಿಂದಾಗಿ, ಜಗತ್ತಿನ ನಾನಾ ಭಾಗಗಳಲ್ಲಿರುವ ಅಬ್ಸರ್ವೇಟರಿಗಳಲ್ಲಿರುವ ದೂರದರ್ಶಕಗಳೆಲ್ಲವೂ ಹವಾಯ್‌ ವಿಜ್ಞಾನಿಗಳು ಸೂಚಿಸಿದ್ದ ದಿಕ್ಕಿನ ಕಡೆಗೆ ತಿರುಗಿಕೊಂಡಿದ್ದವು. ಆಗಿನಿಂದಲೂ ಅದನ್ನು ಪತ್ತೆ ಹಚ್ಚುವ ಕಾರ್ಯ ಸಾಗಿತ್ತು.

ಮುಂದೇನು?: 26 ಅಡಿ ಇರುವ ಆ ರಾಕೆಟ್‌ನ ಭಾಗ, ಭೂಮಿಯ ಗುರುತ್ವಾಕರ್ಷಣೆ ಬಲಕ್ಕೊಳಪಟ್ಟು ಗಂಟೆಗೆ 2,400 ಕಿ.ಮೀ. ವೇಗದಲ್ಲಿ ಭೂಮಿಯ ಕಡೆ ನುಗ್ಗುತ್ತಿದೆ. ತೀರಾ ಹತ್ತಿರಕ್ಕೆ ಬಂದಾಗ ಅದನ್ನು ನಿಗ್ರಹಿಸುವ ಪರಿ ನಿರ್ಧರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next