ಬೆಂಗಳೂರು: ಮರವಂತೆ ಬೀಚ್‌ನಲ್ಲಿ ವಾಹನಗಳ ಪಾಕಿಂìಗ್ ವ್ಯವಸ್ಥೆ ಹಾಗೂ ಆಹಾರ ಮಳಿಗೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಉತ್ತರಿಸಿದರು.
ಶಾಸಕ ಗುರುರಾಜ್ ಗಂಟಿಹೊಳೆ ಮರವಂತೆ ಬೀಚ್‌ನಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಲ್ಲಿ ಪ್ರವಾಸೋ ದ್ಯಮ ಇಲಾಖೆಯ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ಆಹಾರ ಮಳಿಗೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಲು 39.50 ಲಕ್ಷ ರೂ. ಅಂದಾಜು ಪಟ್ಟಿ ಸಲ್ಲಿಸಿದ್ದು 2023-24ನೇ ಸಾಲಿನಲ್ಲಿ ಅನುದಾನದ ಕೊರತೆಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಅನುದಾನ ಲಭ್ಯತೆಯನುಸಾರ ಪರಿಶೀಲಿಸಲಾಗುವುದು ಎಂದರು.
ವಸತಿ ರಹಿತರಿಗೆ ಶೀಘ್ರ ಮನೆ: ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿ ಮಾಡಲಾಗುವುದೆಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ.
ಬೈಂದೂರು ಕ್ಷೇತ್ರದಲ್ಲಿ 2018ರಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿದ್ದು ಗ್ರಾಮೀಣ ಪ್ರದೇಶದಲ್ಲಿ 9,390 ವಸತಿ ರಹಿತರು ಕಂಡು ಬಂದಿದ್ದಾರೆ.
ಸಮೀಕ್ಷೆಯ ಅನಂತರ 2019ರಿಂದ 2021-22ರ ವರೆಗೆ ವಿವಿಧ ವಸತಿ ಯೋಜನೆಗಳಡಿ ಸ್ವಂತ ನಿವೇಶನ ಹೊಂದಿರುವ ಅರ್ಹ 3,279 ಜನರಿಗೆ ಮನೆ ಮಂಜೂರು ಮಾಡಲಾಗಿದೆ. ಪ್ರಸ್ತುತ ಅನುದಾನಕ್ಕೆ ಅನುಗುಣವಾಗಿ ಮಂಜೂರಾತಿ ನೀಡಲಾ ಗುತ್ತದೆ ಎಂದರು.
ವಸತಿ ರಹಿತರಿಗೆ ಮನೆ ಒದಗಿಸಲು ಅನಗತ್ಯ ವಿಳಂಬ ಮಾಡದಿರಿ ಎಂದು ಶಾಸಕರು ಮನವಿ ಮಾಡಿದರು.