Advertisement

ಲಾಲು ಜತೆ ಒಡನಾಟ: JDU ಅಧ್ಯಕ್ಷ ಲಲನ್‌ ಸಿಂಗ್‌ಗೆ ಗೇಟ್‌ಪಾಸ್‌?

12:30 AM Dec 24, 2023 | Team Udayavani |

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಪಕ್ಷ ಜೆಡಿಯು ಅಧ್ಯಕ್ಷ ಸ್ಥಾನದಿಂದ ರಾಜೀವ್‌ ರಂಜನ್‌ ಸಿಂಗ್‌ ಅಲಿಯಾಸ್‌ ಲಲನ್‌ ಸಿಂಗ್‌ರನ್ನು ಕೆಳಗಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ 29ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಅದೇ ನಿತೀಶ್‌ ಈ ಬಗ್ಗೆ ಘೋಷಿಸುವ ಸಾಧ್ಯತೆಯಿದೆ.

Advertisement

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಜತೆ ಲಲನ್‌ ಸಿಂಗ್‌ ಒಡನಾಟ ಹೆಚ್ಚುತ್ತಿರುವುದೇ ನಿತೀಶ್‌ ಕೋಪಕ್ಕೆ ಕಾರಣ. ಅಲ್ಲದೇ, ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗುವುದನ್ನು ತಪ್ಪಿಸಲು ಸ್ವತಃ ನಿತೀಶ್‌ ಅವರೇ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next