Advertisement
ಉತ್ತಮ ಆಡಳಿತ ಮಂಡಳಿ ಪ್ರಶಸ್ತಿ: ಮಂಗಳೂರು ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್‌ನ ಅಧ್ಯಕ್ಷ ಡಾ| ಕೆ.ಸಿ.ನಾೖಕ್, ಪುತ್ತೂರಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಬಂಟ್ವಾಳ ತಾಲೂಕಿನ ವಿಶಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕರಾಗಿದ್ದ ದಿ| ಎಲ್.ಎನ್.ಕುಡೂರು, ಕಣಚೂರು ಪಬ್ಲಿಕ್ ಸ್ಕೂಲ್‌ನ ಚೇರ್ಮನ್ ಯು.ಕೆ.ಮೋನು ಅವರು ಉತ್ತಮ ಆಡಳಿತಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Related Articles
ಉಡುಪಿ: ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ರಾಜ್ಯ ಮಟ್ಟದ ಪ್ರಶಸ್ತಿಗೆ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಶಾಲೆಗಳು ಆಯ್ಕೆಯಾಗಿವೆ. ಉತ್ತಮ ಆಡಳಿತ ನಿರ್ವಹಣೆಗಾಗಿ ಉಡುಪಿಯ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್‌ನ ಡಾ| ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಅಶೋಕ್ ಪೈ, ಕುಂಜಾರುಗಿರಿ ಪಾಜಕ ಆನಂದತೀರ್ಥ ವಿದ್ಯಾಲಯದ ಎನ್. ನಾಗರಾಜ್ ಬಲ್ಲಾಳ್, ಬ್ರಹ್ಮಾವರದ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ ರೆ| ಫಾ| ಜಾನ್ ಫೆರ್ನಾಂಡಿಸ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Advertisement
ಉತ್ತಮ ಶಿಕ್ಷಕ ಪ್ರಶಸ್ತಿಉತ್ತಮ ಶಿಕ್ಷಕ – ಶಿಕ್ಷಕಿ ಪ್ರಶಸ್ತಿಗೆ ಕುಂದಾಪುರ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ತೆರೇಸಾ ಶಾಂತಿ ಡಿ’ಸೋಜಾ, ಅಮಾಸೆಬೈಲು ಡ್ಯುಯೆಲ್ ಸ್ಟಾರ್ ಎಜುಕೇಶನ್ ಇನ್‌ಸ್ಟಿಟ್ಯೂಟ್‌ನ ವಿಘ್ನೇಶ್ ಜಿ.ಎಲ್., ಕಾರ್ಕಳದ ಹಿರ್ಗಾನ ಕುಕ್ಕಂದೂರಿನ ಸೈಂಟ್ ಮರಿಯಾ ಗೊರೆಟ್ಟಿ ಸ್ಕೂಲ್‌ನ ಆರತಿ, ಬೆಳ್ಮಣ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಲೈಡ್ವಿನ್ ಅರಾನ್ಹಾ, ಸಾಸ್ತಾನ ಸೈಂಟ್ ಆ್ಯಂಟನಿ ಆಂಗ್ಲ ಮಾಧ್ಯಮ ಶಾಲೆಯ ಅನಿತಾ ಅಲ್ಮೇಡಾ, ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ವಿನೀತಾ ವಿ., ಸೈಂಟ್ ಕ್ಲೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಅನಿಲ್ ಕುಮಾರ್ ಮತ್ತು ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯ ವಿನುತಾ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.